ಬೆಂಗಳೂರು : ಬೈಕ್ ನಿಲ್ಲಿಸುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಜನಾರ್ಧನ್ ಎಂಬವರನ್ನು ಇಬ್ಬರು ಮುಸ್ಲಿಂ ಯುವಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ರಿಜ್ವಾನ್ ಮತ್ತು ಸುಲೇಮಾನ್ ಎಂಬ ಆರೋಪಿಗಳು ಜನಾರ್ಧನ್ ಅವರನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಇಬ್ಬರು ಎಸ್ಕೇಪ್ ಆಗಿದ್ದಾರೆ.
ಜನಾರ್ಧನ್ ಭಟ್, ರಿಜ್ವಾನ್ ಮತ್ತು ಸುಲೇಮಾನ್ ಸಮೃದ್ಧಿ ಅಪಾರ್ಟಮೆಂಟ್‌ನ ಒಂದೇ ರೂಂ ನಲ್ಲಿ ವಾಸವಿದ್ದರು. 29ನೇ ತಾರೀಖಿನ ರಾತ್ರಿ ಬೈಕ್ ನಿಲ್ಲಿಸುವ ವಿಚಾರಕ್ಕೆ ಈ ಮೂವರ ನಡುವೆ ಗಲಾಟೆ ನಡೆದಿದೆ.

ರಿಜ್ವಾನ್ ಮತ್ತು ಸುಲೇಮಾನ್ ವೈಯರ್ ನಲ್ಲಿ ಜನಾರ್ಧನ್ ರವರ ಕೈ ಕಾಲು ಕಟ್ಟಿ ಬಾಯಿಗೆ ಟೇಪು ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.