ಪುತ್ತೂರು : ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಪುಳುವಾರು ಎಂಬಲ್ಲಿ ನಡೆದಿದೆ.
ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿ ಶಿವಪ್ಪ ಗೌಡ (45) ನಾಪತ್ತೆಯಾದವರು.

ಶಿವಪ್ಪ ರವರ ಸಹೋದರ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಪ್ಪ ಗೌಡ ರವರು ಸಹೋದರ ತಿಮ್ಮಪ್ಪ ಗೌಡ ರವರ ಮನೆಯ ಪಕ್ಕದಲ್ಲಿ ತಂದೆಯ ಹಳೆಯ ಮನೆಯ ಭಾಗದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ಶಿವಪ್ಪ ಗೌಡ ರವರು ಕೂಲಿ ಕೆಲಸ ಮಾಡುತ್ತಿದ್ದರು.
ಶಿವಪ್ಪ ವಿಪರೀತ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದು, ಇದರಿಂದಾಗಿ ಅವರ ಪತ್ನಿ ಮತ್ತು ಮಕ್ಕಳು ಬೆಳ್ತಂಗಡಿ ತಾಲೂಕಿನ ಬಂದಾರು ಎಂಬಲ್ಲಿ ತವರು ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿರುತ್ತಾರೆ. ಶಿವಪ್ಪ ಗೌಡ ರವರು ಮಾ.17ಕ್ಕೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದು, ನಂತರ ವಾಪಸು ಮನೆಗೆ ಬಂದಿರುವುದಿಲ್ಲ.., ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ..

























