ಪುತ್ತೂರು: ಪ್ರತಿಷ್ಠಿತ ಜಿ ಎಲ್ ಸಮೂಹ ಸಂಸ್ಥೆಗಳಿಂದ ಪುತ್ತೂರಿಗೆ ಬಹುದೊಡ್ಡ ಕೊಡುಗೆಯಾಗಿರುವ ‘ಜಿ.ಎಲ್. ವನ್ ಮಾಲ್’ ಏಪ್ರಿಲ್ 2ರ ಸಂಜೆ ಲೋಕಾರ್ಪಣೆಗೊಂಡಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಜಿ ಎಲ್ ವನ್ ಮಾಲ್ ನ ಲೋಗೋ ಅನಾವರಣ ಮಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ
ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರು ಮಾಲ್ ಅನ್ನು ಲೋಕಾರ್ಪಣೆ ಮಾಡಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಮಾಲ್‌ನ ಒಳಗಡೆ ದೀಪಪ್ರಜ್ವಲನೆ ಮಾಡಿದರು.

ಜಿ.ಎಲ್. ಬಲರಾಮ ಆಚಾರ್ಯ ಅವರ ಪತ್ನಿ ರಾಜಿ ಬಲರಾಮ ಆಚಾರ್ಯ, ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ನಿರ್ದೇಶಕ ಸುಧನ್ವ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಎಲ್.ಸಮೂಹ ಸಂಸ್ಥೆ ನಿರ್ದೇಶಕ ಲಕ್ಷ್ಮೀಕಾಂತ್ ಆಚಾರ್ಯ ವಂದಿಸಿದರು. ಪವಿತ್ರಾರೂಪೇಶ್ ಶೇಟ್ ಪ್ರಾರ್ಥಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.

ವೇದಾ ಲಕ್ಷ್ಮೀಕಾಂತ್ ಆಚಾರ್ಯ, ಮೇಘನಾ ಸುಧನ್ವ ಆಚಾರ್ಯ, ನಂದಿತಾ ಸಹಿತ ಜಿ.ಎಲ್. ಕುಟುಂಬ ಮತ್ತು ಸಂಸ್ಥೆಯ ಹಿತೈಷಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
































