ಪುತ್ತೂರು: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಯವರಿಗೆ ಅವಕಾಶ ದೊರೆಯಬೇಕು ಹಾಗೂ ಅಶೋಕ್ ಕುಮಾರ್ ರೈಯವರು ಚುನಾವಣೆಯಲ್ಲಿ ಜಯಗಳಿಸಬೇಕು ಎಂದು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಎ.3 ರಂದು ಪುತ್ತೂರು ತಾಲೂಕಿನ ಐವತ್ತಕ್ಕೂ ಅಧಿಕ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಅಶೋಕ್ ಕುಮಾರ್ ರೈಯವರ ಅಭಿಮಾನಿಗಳು ಹಾಗೂ ಹಿತೈಷಿಗಳು ಪೂಜೆ ಸಲ್ಲಿಸಿದ್ದು, ಅಶೋಕ್ ರೈ ಯವರ ರಾಜಕೀಯ ಭವಿಷ್ಯ ಉಜ್ವಲವಾಗಿರಬೇಕು ಎಂದು ಪ್ರಾರ್ಥನೆ ಸಲ್ಲಿಸಿದರು.
ಅಶೋಕ್ ರೈ ಯವರ ಅಭಿಮಾನಿಗಳು ಜಾತಿ-ಮತ-ಧರ್ಮ ಮರೆತು ನೆಚ್ಚಿನ ನಾಯಕನಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಚುನಾವಣೆಗಾಗಿ ಅಥವಾ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಡವರಿಗೆ ಸಹಾಯ ಮಾಡದೆ ವರ್ಷಂಪ್ರತಿ ಅಶೋಕ್ ರೈ ರವರು ಸಾವಿರಾರು ಮಂದಿ ಬಡವರ ಕಣ್ಣೊರೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿಯ ಉತ್ತಮ ಕೆಲಸ-ಕಾರ್ಯಗಳನ್ನು ಮಾಡುತ್ತಿರುವ ಅಶೋಕ್ ರೈ ಯವರ ಬಗ್ಗೆ ಸಾರ್ವಜನಿಕ ವಲಯ ಉತ್ತಮ ಅಭಿಪ್ರಾಯವಿದ್ದು, ಇನ್ಮುಂದೆಯು ಬಡವರ್ಗದವರ ಸಹಾಯಕ್ಕಾಗಿ ಅವರು ಸಹಾಯಹಸ್ತ ಚಾಚಲಿದ್ದಾರೆ ಎಂಬ ಆಶಾದಾಯಕ ಮನೋಭಾವ ಸಾರ್ವಜನಿಕ ವಲಯದಲ್ಲಿದೆ..































