ಕಡಬ: ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ದೇವಸ್ಥಾನದಲ್ಲಿ “ವರುಣ ಕೃಪೆ’ಗಾಗಿ ಸೀಯಾಳಾಭಿಷೇಕ ಮತ್ತು ವಿಶೇಷ ಪೂಜೆ ಜರುಗಿತು. ಈ ವೇಳೆ ಶ್ರೀ ಮಹಾಗಣಪತಿ ಗುಡಿಯಲ್ಲಿ ಹಚ್ಚಿದ ಒಂದು ಗಂಧದ ಕಡ್ಡಿಯಿಂದ ಎರಡು ಸೆಳೆಯಾಗಿ ಹೊಗೆ ಹೊರ ಬಂದಿದ್ದು, ಹೊಗೆಯನ್ನು ಕಂಡು ಭಕ್ತರು ಮೂಕ ವಿಸ್ಮಿತರಾದರು.

ಗುಡಿಯ ಒಳಗೆ ಬೇರೆ ಯಾವುದೇ ಬಾಗಿಲು ಅಥವಾ ಕಿಟಕಿ ಇಲ್ಲದೇ ಇದ್ದರೂ, ಗುಡಿಗೆ ಇರುವ ಏಕೈಕ ಬಾಗಿಲಿನ ಮೂಲಕ ಹೊರ ಮುಖವಾಗಿ ಹೊಗೆ ಬಂದಿರುವುದು ನಿಜಕ್ಕೂ ಅಚ್ಚರಿಯೆನಿಸಿತು.
ಈ ವಿಸ್ಮಯ ಹವ್ಯಾಸಿ ಛಾಯಾಗ್ರಾಹಕ ಪ್ರದೀಪ್ ಕೊೖಲ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.


























