ಪುತ್ತೂರು : ಇಲ್ಲಿನ ದರ್ಬೆ ಶ್ರೀರಾಮ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ 3 ನೇ ಶಾಖೆಯು ನೂತನವಾಗಿ ಈಶ್ವರ ಮಂಗಲ ಹಿರಾ ಕಾಂಪ್ಲೆಕ್ಸ್‌ನಲ್ಲಿ ಎ.27ರಂದು ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಶಾಸಕರಾದ ಸಂಜೀವ ಮಠಂದೂರುರವರು ಉದ್ಘಾಟಿಸಿದರು. ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಎನ್.ಜಗನ್ನಾಥ ರೈ ಮಾದೋಡಿರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಹನುಮಗಿರಿ ಶ್ರೀ ಪಂಚಮುಖಿ ದೇವಸ್ಥಾನದ ಮಹಾಪೋಷಕರಾದ ಮಹಾಬಲೇಶ್ವರ ಭಟ್‌ರವರು ಠೇವಣಿ ಪತ್ರ ಬಿಡುಗಡೆ ಮಾಡಿದರು.
ಅತಿಥಿಗಳಾಗಿ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ, ಅಧ್ಯಕ್ಷ ರಮೇಶ್ ರೈ ಸಾಂತ್ಯ ,ಹಿರಾ ಕಾಂಪ್ಲೇಕ್ಸ್‌ನ ಮಾಲಕರಾದ ಅಬ್ದುಲ್ ಖಾದರ್, ಉಪಾಧ್ಯಕ್ಷರಾದ ಎ. ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ,ಮುಖ್ಯ ಕಾರ್ಯರ್ನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು, ದಯಾನಂದ ರೈ ಮನವಳಿಕೆಗುತ್ತು, ಜೈರಾಜ್ ಭಂಡಾರಿ ನೋಣಾಲು, ಬೂಡಿಯಾರ್ ರಾಧಾಕೃಷ್ಣ ರೈ, ಪುರಂದರ ರೈ ಮಿತ್ರಂಪಾಡಿ, ಕೆ. ವಸಂತ ಕುಮಾರ್ ರೈ ದುಗ್ಗಳ,ಎಚ್. ಪ್ರವೀಣ್ ಭಂಡಾರಿ ಭಾವಬೀಡು, ಜಯರಾಮ ರೈ ನುಲಿಯಾಲು, ಸಂಜೀವ ಆಳ್ವ ಪಿ. ಹಾರಾಡಿ, ಚನಿಲ ತಿಮ್ಮಪ್ಪ ಶೆಟ್ಟಿ, ಬಾಲಾಕೃಷ್ಣ ಕೊಂಡೆವೊರು, ವಿದ್ಯಾ ಪ್ರಸಾದ್ ಆಳ್ವ, ಉಪ್ಪಳಿಗೆ, ಶಾಖಾ ಮೆನೇಜರ್ ಸುಮಂತ್ ರೈ, ಐಶ್ವರ್ಯ ರೈ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಾಲಕೃಷ್ಣ ರೈ ಅಲೆಪ್ಪಾಡಿ ರವರು ಪ್ರಥಮ ಠೇವಣಿಯನ್ನು ಬ್ಯಾಂಕ್ ನಲ್ಲಿರಿಸಿದರು. ಜಯರಾಜ್ ಭಂಡಾರಿ ಧನ್ಯವಾದ ಸಮರ್ಪಸಿದರು. ಪುರಂದರ ರೈ ಮಿತ್ರಂಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.