ಮಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರವಿವಾರದಂದು ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಮತ್ತು ಸ್ಥಳೀಯ ಪೊಲೀಸರು ಪಥಸಂಚಲನ ನಡೆಸಿದರು.

ಕಡಬ ಪೇಟೆ, ಕಾಳಾರ, ಕೋಡಿಂಬಾಳ, ಕಲ್ಲುಗುಡ್ಡೆ, ವೇಣೂರು ಮೇಲಿನ ಪೇಟೆ, ಮೂಡುಕೊಡಿ, ನಾರಾವಿ, ಪುತ್ತೂರು ನಗರ ಠಾಣೆ ವ್ಯಾಪ್ತಿಯ ಮುಕ್ವೆ – ಪುರುಷರ ಕಟ್ಟೆ, ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ಕಿಲಾಡಿ, ಉಪ್ಪಿನಂಗಡಿ ಪೇಟೆ, ಹಿರೇಬಂಡಾಡಿ, ಸುಬ್ರಹ್ಮಣ್ಯ ಕ್ರಾಸ್, ಕರಾಯ, ಕಲ್ಲೇರಿ, ಕುಪ್ಪೆಟ್ಟಿ, ಕಾವಲಕಟ್ಟೆ, ಧೂಮಳಿಕೆ, ಎನ್.ಸಿ. ರೋಡ್ ಮೊದಲಾದೆಡೆ ಪಥಸಂಚಲನ ನಡೆಸಿದರು.























