ಪುತ್ತೂರು : ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ರವರಿಗೆ ಸ್ಥಾನ ನೀಡದ ಹಿನ್ನೆಲೆ ವ್ಯಕ್ತಿಯೋರ್ವರು ಪಕ್ಷೇತರರಾಗಿ ಪುತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕೃಷ್ಣನಗರ ನಿವಾಸಿಯಾಗಿರುವ ಚಿರಾಗ್ ಪೂಟ್ ವೇರ್ ಮಾಲಕ ಸಂಜೀವ ಗೌಡ ಪಿಲಿಬೈಲು ರವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಮರ್ಥ ಶಾಸಕರಾಗಿ ಅಭಿವೃದ್ಧಿಯನ್ನು ಮಾಡಿದ, ಜಾತಿ ಬೇಧವಿಲ್ಲದೆ ಪುತ್ತೂರು ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ ಸಂಜೀವ ಮಠಂದೂರು ರವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
























