ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣ. ಮಂಗಳೂರಿನ ನಂತರ ಇರುವಂತಹ ದೊಡ್ಡ ಪಟ್ಟಣ ಹಾಗೂ ವ್ಯಾಪಾರಿ ಕೇಂದ್ರವೆಂದರೆ ಅದು ಮುತ್ತಿನ ನಗರಿ ಪುತ್ತೂರು.
ಪುತ್ತೂರು 9.84 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಪುತ್ತೂರು ನಗರವು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ದೊಡ್ಡ ಪಟ್ಟಣ ಆಗಿದೆ. ಮಂಗಳೂರು – ಮೈಸೂರು ಹೆದ್ದಾರಿ (ಬಂಟ್ವಾಳ -ಮೈಸೂರು ರಾಜ್ಯ ಹೆದ್ದಾರಿ 88)ಯಲ್ಲಿರುವ ಇದು ಮಂಗಳೂರು, ಜಿಲ್ಲಾ ಹೆಡ್ ಕ್ವಾರ್ಟರ್ ನಿಂದ 52 ಕಿಮೀ ದೂರದಲ್ಲಿದೆ. 68 ಹಳ್ಳಿಗಳನ್ನು ಒಳಗೊಂಡ 37 ಗ್ರಾಮ ಪಂಚಾಯತುಗಳಿಗೆ ಪುತ್ತೂರು ಪ್ರಧಾನ ಕಾರ್ಯಸ್ಥಾನವಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರವು ಕರ್ನಾಟಕ ವಿಧಾನಸಭೆಯ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.
ಪುತ್ತೂರಿನ ಮತದಾರರ ವಿವರ :
ಪುರುಷರು : 1,04,234
ಮಹಿಳೆಯರು : 1,06, 975
ಯುವ ಮತದಾರರು : 4,761
80 ವರ್ಷ ಮೇಲ್ಪಟ್ಟವರು : 4,482
ಅಂಗವಿಕಲರು : 2,047
ಒಟ್ಟು ಮತದಾರರು : 2,11,212
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 220 ಮತಗಟ್ಟೆಗಳಿವೆ..
ವಿಧಾನ ಸಭೆಯ ಸದಸ್ಯರು:





























