ಪುತ್ತೂರು : ವಿಧಾನ ಸಭಾ ಚುನಾವಣಾ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಬಹಳ ಕುತೂಹಲಕಾರಿಯಾಗಿತ್ತು. ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸದ ಕೈ ಪಾಳಯ ಮೂರನೇ ಪಟ್ಟಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.
ಈ ಬಾರಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾಮಾಜಿಕ, ಧಾರ್ಮಿಕ ಮುಂದಾಳು ಅಶೋಕ್ ಕುಮಾರ್ ರೈ ಯವರ ಹೆಸರು ಪ್ರಕಟಗೊಂಡಿದೆ.
ಹಲವು ವರ್ಷಗಳಿಂದ ತನ್ನ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ.) ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲದೆ ಬಡವರ್ಗದ ಮನೆಯ ಹೆಣ್ಣು ಮಕ್ಕಳ ಮದುವೆ ಸಹಕಾರ, ಬಡವರ್ಗದ ಕುಟುಂಬದಲ್ಲಿ ಯಾರದರೂ ಅನಾರೋಗ್ಯದಿಂದಿದ್ದರೆ ಅವರ ಚಿಕಿತ್ಸೆ ಸಹಾಯ, ಮಳೆಯಿಂದಾಗಿ ಬಡ ವರ್ಗದವರ ಮನೆ ಕುಸಿದು ಬಿದ್ದರೆ ಹೊಸ ಮನೆ ನಿರ್ಮಾಣ ಅಷ್ಟೇ ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಬಡವರ ಜೊತೆ ದೀಪಾವಳಿ ಆಚರಿಸುವ ಮುಖಾಂತರ ತಾನು ಉದ್ಯಮದಲ್ಲಿ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ದಾನ ಮಾಡುವ ಮುಖಾಂತರ ಹಲವು ಶ್ರೀಮಂತ ಉದ್ಯಮಿಗಳಿಗೆ ಮಾದರಿ ಎನಿಸಿದ್ದಾರೆ.
ಅದೇ ರೀತಿ ಕಳೆದ ಕೊರೊನಾ ಸಂದರ್ಭದಲ್ಲಿಯೂ ಬಡ ಜನತೆಗೆ, ಆಟೋ ಚಾಲಕರಿಗೆ ಕಿಟ್ ಗಳನ್ನು ನೀಡುವ ಮೂಲಕ ಸ್ಪಂದಿಸಿದ್ದಾರೆ. ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಬಸ್ ಪಾಸ್ ವಿತರಣೆ., ಬಡ ವರ್ಗದ ಮಕ್ಕಳಿಗೆ ಶಾಲೆಗೆ ತೆರಳಲು ಬೇಕಾದ ಸಮವಸ್ತ್ರ, ಪುಸ್ತಕಗಳು, ಬ್ಯಾಗ್, ಶಾಲಾ ಶುಲ್ಕ ವಿತರಣೆ., ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ., ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ನೀಡಿಕೆ ಹೀಗೆ ಹಲವಾರು ವಿಧವಾಗಿ ಸುಮಾರು 7,500 ಕುಟುಂಬಗಳಿಗೂ ಅಧಿಕ ಬಡ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸಿದ, ಇಂದಿಗೂ ಬಡ ವರ್ಗದ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.


ಮೂರನೇ ಪಟ್ಟಿ ಇಂತಿದೆ
- ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ
- ಕೋಲಾರ ಕ್ಷೇತ್ರ-ಕೊತ್ತೂರು ಮಂಜುನಾಥ
- ಚಿಕ್ಕಪೇಟೆ ಕ್ಷೇತ್ರ-ಆರ್.ವಿ.ದೇವರಾಜ್
- ಅರಸೀಕೆರೆ ಕ್ಷೇತ್ರ-ಕೆ.ಎಂ.ಶಿವಲಿಂಗೇಗೌಡ
- ಬೊಮ್ಮನಹಳ್ಳಿ ಕ್ಷೇತ್ರ-ಉಮಾಪತಿ ಶ್ರೀನಿವಾಸಗೌಡ
- ಕುಂದಗೋಳ ಕ್ಷೇತ್ರ-ಕುಸುಮಾ ಶಿವಳ್ಳಿ
- ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್
- ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್
- ಬೆಳಗಾವಿ ದಕ್ಷಿಣ ಕ್ಷೇತ್ರ-ಪ್ರಭಾವತಿ ಮಾಸ್ತಿ ಮರಡಿ
- ತೇರದಾಳ ಕ್ಷೇತ್ರ-ಸಿದ್ದಪ್ಪ ರಾಮಪ್ಪ ಕೊಣ್ಣೂರು
- ದೇವರಹಿಪ್ಪರಗಿ-ಶರಣಪ್ಪ ಟಿ.ಸುಣಗಾರ
- ಮೂಡಿಗೆರೆ ಕ್ಷೇತ್ರ-ನಯನಾ ಜ್ಯೋತಿ ಜವಾರ್(ಮೋಟಮ್ಮ ಪುತ್ರಿ)
- ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ
- ಕಲಬುರಗಿ ಗ್ರಾಮಾಂತರ ಕ್ಷೇತ್ರ-ರೇವೂನಾಯ್ಕ್ ಬೆಳಮಗಿ
- ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್ ರಾವ್
- ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ
- ದೇವದುರ್ಗ ಕ್ಷೇತ್ರ-ಶ್ರೀದೇವಿ ಆರ್.ನಾಯಕ
- ಸಿಂಧನೂರು ಕ್ಷೇತ್ರ-ಹಂಪನಗೌಡ ಬಾದರ್ಲಿ
- ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ
- ನವಲಗುಂದ ಕ್ಷೇತ್ರ-ಎನ್.ಹೆಚ್.ಕೋನರೆಡ್ಡಿ
- ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ
- ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್
- ಬಳ್ಳಾರಿ ನಗರ ಕ್ಷೇತ್ರ-ಭರತ್ ರೆಡ್ಡಿ
- ಜಗಳೂರು ಕ್ಷೇತ್ರ-ಬಿ.ದೇವೇಂದ್ರಪ್ಪ
- ಹರಪನಹಳ್ಳಿ ಕ್ಷೇತ್ರ-ಎನ್.ಕೊಟ್ರೇಶ್
- ಹೊನ್ನಾಳಿ ಕ್ಷೇತ್ರ-ಡಿ.ಜಿ.ಶಾಂತನಗೌಡ
- ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ-ಡಾ.ಶ್ರೀನಿವಾಸ ಕರಿಯಣ್ಣ
- ಶಿವಮೊಗ್ಗ ನಗರ ಕ್ಷೇತ್ರ-ಹೆಚ್.ಸಿ.ಯೋಗೇಶ್
- ಶಿಕಾರಿಪುರ ಕ್ಷೇತ್ರ-ಜಿ.ಬಿ.ಮಾಲ್ತೇಶ್
- ಕಾರ್ಕಳ ಕ್ಷೇತ್ರ-ಉದಯ್ ಶೆಟ್ಟಿ
- ತರೀಕೆರೆ ಕ್ಷೇತ್ರ-ಜಿ.ಹೆಚ್.ಶ್ರೀನಿವಾಸ
- ತುಮಕೂರು ಗ್ರಾಮಾಂತರ ಕ್ಷೇತ್ರ-ಜಿ.ಹೆಚ್.ಷಣ್ಮುಖಪ್ಪ ಯಾದವ್
- ಚಿಕ್ಕಬಳ್ಳಾಪುರ ಕ್ಷೇತ್ರ-ಪ್ರದೀಪ್ ಈಶ್ವರ್ ಅಯ್ಯರ್
- ದಾಸರಹಳ್ಳಿ ಕ್ಷೇತ್ರ-ಧನಂಜಯ ಗಂಗಾಧರಯ್ಯ
- ಬೆಂಗಳೂರು ದಕ್ಷಿಣ ಕ್ಷೇತ್ರ-ಆರ್.ಕೆ.ರಮೇಶ್
- ಚನ್ನಪಟ್ಟಣ ಕ್ಷೇತ್ರ-ಎಸ್.ಗಂಗಾಧರ್
- ಮದ್ದೂರು ಕ್ಷೇತ್ರ-ಕೆ.ಎಂ.ಉದಯ್
- ಹಾಸನ ಕ್ಷೇತ್ರ-ಬನವಾಸಿ ರಂಗಸ್ವಾಮಿ
- ಮಂಗಳೂರು ನಗರ ದಕ್ಷಿಣ ಕ್ಷೇತ್ರ-ಜಾನ್ ರಿಚರ್ಡ್ ಲೋಬೋ
- ಪುತ್ತೂರು ಕ್ಷೇತ್ರ-ಅಶೋಕ್ ಕುಮಾರ್ ರೈ
- ಮೈಸೂರಿನ ಕೃಷ್ಣರಾಜ ಕ್ಷೇತ್ರ-ಎಂ.ಕೆ.ಸೋಮಶೇಖರ್
- ಮೈಸೂರಿನ ಚಾಮರಾಜ ಕ್ಷೇತ್ರ-ಕೆ.ಹರೀಶ್ ಗೌಡ




























