ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಎ.16 ರಂದು ಬಲ್ನಾಡು ಉಳ್ಳಾಲ್ತಿ ಅಮ್ಮನವರ ಭಂಡಾರ ಆಗಮನದ ವೇಳೆ ಉಳ್ಳಾಲ್ತಿ ಅಮ್ಮನವರಿಗೆ ಪ್ರಿಯವಾದಂತಹ ಮಲ್ಲಿಗೆಯನ್ನು ಕಡಿಮೆ ದರದಲ್ಲಿ ಭಕ್ತರಿಗೆ ನೀಡುವ ಸಲುವಾಗಿ ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ “ಹಿಂದುತ್ವದ ಮಲ್ಲಿಗೆ” ಶೀರ್ಷಿಕೆಯಡಿಯಲ್ಲಿ ಪುತ್ತೂರು ಪೇಟೆಯಲ್ಲಿ 10 ಸ್ಟಾಲ್ ಗಳನ್ನು ಹಾಕಲಾಗಿದೆ.

ಪ್ರತಿ ವರ್ಷವೂ ಬಲ್ನಾಡು ಉಳ್ಳಾಲ್ತಿ ಅಮ್ಮನವರ ಭಂಡಾರ ಆಗಮನದ ವೇಳೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಲ್ಲಿಗೆ ಮಾರಾಟ ಮಾಡುತ್ತಿದ್ದು, ಈ ಬಾರಿಯೂ ಸ್ಟಾಲ್ ಗಳನ್ನು ನಿರ್ಮಾಣ ಮಾಡಲಾಗಿದೆ.




























