ಮಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ರಾಜ್ ಪೂಜಾರಿ ಅವರ ನಗರದ ಎರಡು ಮನೆ ಮತ್ತು ಕಚೇರಿಗೆ ಶನಿವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
14 ಮಂದಿ ಅಧಿಕಾರಿಗಳ ತಂಡ ವಿವೇಕ್ ರಾಜ್ ಅವರಿಗೆ ಸೇರಿದ ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗಳಿಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿವೇಕ್ ರಾಜ್ ಪೂಜಾರಿ ಅವರು, ನನ್ನ ವ್ಯವಹಾರದ ದಾಖಲೆಪತ್ರಗಳು ಸಮರ್ಪಕವಾಗಿದೆ. ನಾನು ತೆರಿಗೆ ವಂಚಿಸಿ ವ್ಯವಹರಿಸುವುದಿಲ್ಲ. ಇದು ಬಿಜೆಪಿಗರ ಕುಮ್ಮಕ್ಕಿನಿಂದ ಐಟಿ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ.




























