ಪುತ್ತೂರು : ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಪುತ್ತಿಲ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿತು.

ಮೆರವಣಿಗೆಯ ಮೊದಲು ಅರುಣ್ ಪುತ್ತಿಲ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದರ್ಬೆಯಲ್ಲಿ ಶಂಖನಾದ, ಕಹಳೆ ಮೊಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ನೆರೆದಿದ್ದರು. ಹಿಂದೂ ಮುಖಂಡ ದಿ. ಮೂಲ್ಕಿ ಸುಖಾನಂದ ಶೆಟ್ಟಿ ಅವರ ಸಹೋದರ ಸಂತೋಷ್ ಶೆಟ್ಟಿ, ಲಕ್ಷ್ಮೀಶ ತಂತ್ರಿ ಅವರು ಕಹಳೆ ಊದಿ ಚಾಲನೆ ನೀಡಿದರು.
ಬ್ಯಾಂಡ್, ವಾದ್ಯದ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಪುತ್ತಿಲ ಅವರಿಗೆ ರಸ್ತೆಯುದ್ದಕ್ಕೂ ಹೂವಿನ ಹಾರ ಹಾಕಲಾಯಿತು. ದರ್ಬೆಯಿಂದ ಮುಖ್ಯ ರಸ್ತೆ ಮೂಲಕ ಸಾಗಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಸಂತೋಷ್ ಮಾಡ್ತ, ಪ್ರವೀಣ್ ಶೆಟ್ಟಿ ತಿಂಗಲಾಡಿ, ವಿಜಿತ್ ಕುಮಾರ್ ನೆಜಿಕ್ಕಾರ್, ಪುಷ್ಪ ಜೊತೆಗಿದ್ದರು.



























