ಪುತ್ತೂರು : ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ರವರು ಪುತ್ತೂರು ಮಾಯಿ ದೇ ದೇವುಸ್ ಚರ್ಚ್ ಗೆ ಭೇಟಿ ನೀಡಿದರು.

ಮುಖ್ಯ ಗುರುಗಳಾದ ರೇ.ಫಾ. ಲಾರೆನ್ಸ್ ಮಸ್ಕರೇನಸ್ ರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮುಖ್ಯಗುರುಗಳು ಅಶೋಕ್ ಕುಮಾರ್ ರೈ ಅವರಿಗೆ ಶುಭ ಹಾರೈಸಿ ಆಶೀರ್ವದಿಸಿದರು.

ಈ ವೇಳೆ ಕ್ರೈಸ್ತ ಸಮುದಾಯದ ಹಲವು ನಾಯಕರನ್ನು ಭೇಟಿಯಾಗಿ ಬೆಂಬಲ ಯಾಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರು ಜೊತೆಗಿದ್ದರು..



























