ಪುತ್ತೂರು : ವಿಧಾನ ಸಭಾ ಚುನಾವಣೆ ಹಿನ್ನೆಲೆ ಗಡಿಪಾರು ಮಾಡಿ ಆದೇಶಿಸಲಾಗಿದ್ದ.., ಆದೇಶಕ್ಕೆ ಪುತ್ತೂರಿನ ನೆಹರು ನಗರ ನಿವಾಸಿ ಇಬ್ರಾಹಿಂ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿದು ಬಂದಿದೆ.
ಚುನಾವಣಾ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪುತ್ತೂರು ತಾಲೂಕು ಕಬಕ ಗ್ರಾಮ ನೆಹರೂ ನಗರ ನಿವಾಸಿ ಇಬ್ರಾಹಿಂ (ಇಬ್ಬಿ) ರನ್ನು ಗಡಿಪಾರು ಮಾಡಿ ಆದೇಶಿಸಲಾಗಿತ್ತು.
ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಇಬ್ರಾಹಿಂ ಗಡಿಪಾರು ಆದೇಶ ತಡೆಯಾಜ್ಞೆ ತಂದಿದ್ದಾರೆ.
ಇಬ್ರಾಹಿಂ ಪರ ವಕೀಲರಾದ ಶಫೀಕ್ ವಾದಿಸಿದರು.

























