ಮಂಗಳೂರು/ಉಡುಪಿ: ವಿಧಾನಸಭಾ ಚುನಾವಣೆ ಸಂಬಂಧ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಹಾಗೂ ಉಡುಪಿ ಜಿಲ್ಲೆಯಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಒಟ್ಟು ದ.ಕ ಜಿಲ್ಲೆಯಲ್ಲಿ 72 ಅಭ್ಯರ್ಥಿಗಳ ಹಾಗೂ ಉಡುಪಿ ಜಿಲ್ಲೆಯಲ್ಲಿ 39 ಮಂದಿಯ ನಾಮಪತ್ರಗಳು ಸ್ವೀಕಾರಗೊಂಡಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 109 ನಾಮಪತ್ರ ಸಲ್ಲಿಕೆಯಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ 88 ನಾಮಪತ್ರ ಸಲ್ಲಿಕೆಯಾಗಿದ್ದವು.
ಮಂಗಳೂರು ನಗರ ಉತ್ತರದಲ್ಲಿ ಒಂದು ಹಾಗೂ ಮಂಗಳೂರು ನಗರ ದಕ್ಷಿಣ, ಮಂಗಳೂರು ಹಾಗೂ ಬಂಟ್ವಾಳದಲ್ಲಿ ತಲಾ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಬೆಳ್ತಂಗಡಿ -10, ಮೂಡುಬಿದಿರೆಯಲ್ಲಿ – 9, ಮಂಗಳೂರು ನಗರ ಉತ್ತರ -12, ಮಂಗಳೂರು ನಗರ ದಕ್ಷಿಣ -8, ಮಂಗಳೂರು -8, ಬಂಟ್ವಾಳ -6, ಪುತ್ತೂರು -10 ಹಾಗೂ ಸುಳ್ಯದ 9 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಎ.24 ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಹಾಗೆಯೇ ಉಡುಪಿ ಜಿಲ್ಲೆಯ ಕುಂದಾಪುರದಿಂದ ಶಂಕರ ಅಂಕದಕಟ್ಟೆ, ಕಾರ್ಕಳದಿಂದ ಉದಯಕುಮಾರ್ ಎಂ., ದಯಾನಂದ ಶೆಟ್ಟಿಯವರ ನಾಮಪತ್ರ ತಿರಸ್ಕೃತಗೊಂಡಿದೆ.


























