ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ತಮ್ಮ ಚುನಾವಣಾ ಚಿಹ್ನೆಯನ್ನು ಪ್ರಕಟಗೊಳಿಸಿದ್ದಾರೆ.
ಪುತ್ತಿಲ ರವರು ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ‘ಬ್ಯಾಟ್’ ಅನ್ನು ಆಯ್ದುಕೊಂಡಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪುತ್ತಿಲ ರವರು ತಮ್ಮ ಚಿಹ್ನೆಯಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಬಗ್ಗೆ ಭಾರೀ ಕುತೂಹಲವಿತ್ತು.
ಬ್ಯಾಟ್ ಅನ್ನು ತಮ್ಮ ಚಿಹ್ನೆಯಾಗಿ ಆಯ್ಕೆ ಮಾಡಿಕೊಂಡಿರುವ ಪುತ್ತಿಲ ರವರು ಎದುರಾಳಿ ಅಭ್ಯರ್ಥಿಗಳನ್ನು ಕ್ಲೀನ್ ಸ್ವೀಪ್ ಮಾಡಿ ವಿಜಯ ಪತಾಕೆ ಹಾರಿಸುವರೆ ಎಂದು ಕಾದು ನೋಡಬೇಕಿದೆ…


























