ಪುತ್ತೂರು : ವ್ಯಕ್ತಿಯೋರ್ವರು ಅನಾರೋಗ್ಯದಿಂದಾಗಿ ನಿಧನರಾದ ಘಟನೆ ತಾರಿಗುಡ್ಡೆಯಲ್ಲಿ ನಡೆದಿದೆ.
ಮೃತರನ್ನು ತಾರಿಗುಡ್ಡೆ ನಿವಾಸಿ ಪ್ರಭಾಕರ್ ರೈ (56) ಎಂದು ಗುರುತಿಸಲಾಗಿದೆ.

ಪ್ರಭಾಕರ್ ರವರು ಗೂಡ್ಸ್ ಲಾರಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲ ಸಮಯಗಳಿಂದ ಮನೆಯಲ್ಲಿಯೇ ಇದ್ದರು.
ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದ ಅವರು ಇಂದು ನಿಧನರಾದರು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

























