ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಪರವಾಗಿ ಮಹಿಳಾ ಸಮಾವೇಶ ‘ಸೀತಾಪರಿವಾರ’ ಎ.28 ರಂದು ನಡೆಯಲಿದೆ.
ಮಹಿಳಾ ಸಮಾವೇಶ ‘ಸೀತಾಪರಿವಾರ’ ಕಾರ್ಯಕ್ರಮವು ಎ.28 ಸಂಜೆ 4 ಗಂಟೆಗೆ ಮುಕ್ರಂಪಾಡಿಯ ಸುಭದ್ರ ಸಭಾಂಗಣದಲ್ಲಿ ನಡೆಯಲಿದೆ.
ಹಿಂದುತ್ವದ ಅಡಿಯಲ್ಲಿ ಸುಮಾರು 30 ವರ್ಷಗಳಿಂದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಅರುಣ್ ಕುಮಾರ್ ಪುತ್ತಿಲ ರವರು ಕಾರ್ಯಕರ್ತರ ಅಪೇಕ್ಷೆಯಂತೆ ಈ ಬಾರಿ ಪಕ್ಷೇತರ
ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಅವರ ಗೆಲುವು ರಾಜ್ಯದಲ್ಲಿ ಬಿಜೆಪಿಯ ಗೆಲವುವಾಗಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಗೆಲುವು ಆಗಲಿದೆ. ಹಾಗಾಗಿ ಮಹಿಳಾ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಬೆಂಬಲ ಸೂಚಿಸಲಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿದ್ದು, ಮಹಿಳಾ ಕಾರ್ಯಕರ್ತರು ‘ಸೀತಾಪರಿವಾರ’ ಎಂಬ ಹೆಸರಿನಡಿಯಲ್ಲಿ ಸಮಾವೇಶ ನಡೆಸಲಿದ್ದಾರೆ.
ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೀತಾ ಪರಿವಾರ ಸಮಾವೇಶದ ಪ್ರಮುಖರಾಗಿರುವ ವಸಂತ ಲಕ್ಷ್ಮೀ ರವರು ಪತ್ರಿಕಾಗೋಷ್ಠಿ ತಿಳಿಸಿದರು.



























