ಸಾಮಾಜಿಕ ಜಾಲತಾಣಗಳು ಬಂದ ಬಳಿಕವಂತೂ ಬಳಕೆದಾರರು ತೋಚಿದ್ದನ್ನು, ಗೀಚಿದನ್ನು ಹಿಂದೂ-ಮುಂದು ನೋಡದೆ ಅಪ್ಲೋಡ್ ಮಾಡುತ್ತಾರೆ. ಅದರಲ್ಲೂ ಕೆಲವರು ಕುಂತರೂ, ನಿಂತರೂ ಕೂಡ ಫೋಟೋ ಅಥವಾ ವಿಡಿಯೋವನ್ನು ಹಾಕುತ್ತಾರೆ. ಹೀಗೆ ವ್ಯಕ್ತಿಯೊಬ್ಬ ಹಂಚಿಕೊಂಡ ಫೋಟೋ ಆತನಿಗೆ ಕುತ್ತು ತಂದಿದೆ.
ಬರೋಬ್ಬರಿ 3.5 ಲಕ್ಷದಷ್ಟು ದಂಡದ ಜೊತೆಗೆ ಜೈಲೂಟ ಸವಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಆತ ಮಾಡಿದ ತಪ್ಪೇನು ಗೊತ್ತಾ..!!??
ಸಾಮಾನ್ಯವಾಗಿ ಪಬ್, ರೆಸ್ಟೋರೆಂಟ್ಗೆ ಹೋದರೆ ಅಲ್ಲಿನ ಫೋಟೋ ಹಾಕಿಕೊಳ್ಳುತ್ತೇವೆ. ಇನ್ನು ಕೆಲವರು ಅಲ್ಲಿನ ನೆನಪುಗಳನ್ನು ಹಿಡಿದಿಟ್ಟುಕೊಳ್ಳಲು ಫೋಟೋ ತೆಗೆಸಿಕೊಳ್ಳುತ್ತಾರೆ. ಮತ್ತೆ ಹಲವರು ಪ್ರತಿಷ್ಠೆಗಾಗಿ ಸಿಕ್ಕ ಸಿಕ್ಕ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅದರಂತೆಯೇ ವ್ಯಕ್ತಿಯೊಬ್ಬ ಬಿಯರ್ ಫೋಟೋ ಹಂಚಿಕೊಂಡಿದ್ದಕ್ಕೆ ಫೇಸ್ಬುಕ್ ಸರಿಯಾಗಿ ದಂಡ ಹಾಕಿದೆ.
6 ತಿಂಗಳು ಜೈಲು..3.5 ಲಕ್ಷ ದಂಡ..!!!
ಥೈಲಾಂಡ್ನಲ್ಲಿ ಈ ಘಟನೆ ನಡೆದಿದೆ. ಆರ್ಟಿಡ್ ಶಿವಾಂಸಪನ್ ಎಂಬಾತ ಕ್ರಾಫ್ಟ್ ಬಿಯರ್ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾನೆ. ಆದರೆ ಆತ ಆಲ್ಕೋಹಾಲ್ ಜಾಹೀರಾತಿನ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾನೆ. 6 ತಿಂಗಳ ಕಾಲ ಜೈಲು ವಾಸದ ಜೊತೆಗೆ 3.5 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿದೆ.
ಆರ್ಟಿಡ್ 2020ರಲ್ಲಿ ಫೇಸ್ಬುಕ್ನಲ್ಲಿ ಬಿಯರ್ ಫೋಟೋ ಪೋಸ್ಟ್ ಮಾಡಿದ್ದ. ಆದರೆ ಬ್ಯಾಂಕಾಕ್ನ ನೊಂತಬುರಿ ನ್ಯಾಯಾಲಯ ಆತನನಿಗೆ ಶುಕ್ರವಾರದಂದು ಶಿಕ್ಷೆ ವಿಧಿಸಿದೆ.
ನಿಮಗೂ ಗೊತ್ತಿರಲಿ ಈ ಕಾನೂನು..:
ಅಂದಹಾಗೆಯೇ 2008 ಆಲ್ಕೋಹಾಲ್ ಪಾನೀಯ ನಿಯಂತ್ರಣ ಕಾಯ್ದೆಯು ‘‘ಯಾವುದೇ ಮದ್ಯಪಾನದ ಹೆಸರು ಅಥವಾ ಟ್ರೇಡ್ ಮಾರ್ಕ್ ಅನ್ನು ನೇರವಾಗಿ ಮತ್ತು ಪರೋಕ್ಷವಾಗಿ ಜಾಹೀರಾತು ಹಾಕಿಕೊಳ್ಳುವುದನ್ನು ನಿಷೇಧಿಸಿದೆ’’. ಒಂದು ವೇಳೆ ಈ ಕಾನೂನು ಉಲ್ಲಂಘಿದರೆ ಜೈಲು ಶಿಕ್ಷೆ ಮತ್ತು 11 ಲಕ್ಷದವರೆಗೆ ಶಿಕ್ಷೆ ಕಟ್ಟಿಟ್ಟಬುತ್ತಿ.
ಆತ ಫ್ರೀಲಾನ್ಸರ್ ಬರಹಗಾರ
ಸಾಮಾನ್ಯವಾಗಿ ಶೋಕಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಯರ್ ಇನ್ನಿತರ ಫೋಟೋ ಹಂಚಿಕೊಳ್ಳುತ್ತಾರೆ. ಆದರೆ ಆರ್ಟಿಡ್ ಇದಾವುದೇ ಶೋಕಿಗಾಗಿ ಹಂಚಿಕೊಂಡಿದಲ್ಲ. ಕಾರಣ ಆತನ ಫ್ರೀಲಾನ್ಸರ್ ಬರಹಗಾರ ಮತ್ತು ಕ್ರಾಫ್ಟ್ ಬಿಯರ್ ಬಗ್ಗೆ ಒಲವು ಹೊಂದಿದ್ದ. ಸುಮಾರು 10 ವರ್ಷದಿಂದ ಥಾಯ್ ಮತ್ತು ವಿದೇಶಿ ಬಿಯರ್ ಬಗ್ಗೆ ಬರೆದುಕೊಂಡು ಬಂದಿದ್ದಾನೆ.

























