ಪುತ್ತೂರು:ಅತ್ಯಾಧುನಿಕ ಮಾದರಿಯಲ್ಲಿ ಮರದ ಉಪಕರಣಗಳು , ನವೀಕೃತ ಮರದ ರೂಪದಲ್ಲೇ ಕಾಣಿಸಿಕೊಳ್ಳುವ ವಸ್ತುಗಳು, ಈ ಮೂಲಕ ಲಭ್ಯ. ಇದೀಗ ಮರದಿಂದಲೇ ತಯಾರಾದ ವಸ್ತುಗಳಂತೆ ನೈಜತೆಯಿಂದ ಕಾಣುವ ಅತ್ಯಂತ ಆಕರ್ಷಣೀಯ ಉಪಕರಣಗಳು ಕೈಗೆ ದೊರಕುತ್ತಿದೆ. ಹೇಗೆ ಅಂತೀರಾ?, ಪರಿಸರ ಸ್ನೇಹಿ ಹಾಗೂ ಕಸ ಮತ್ತು ಮರದ ಅಳಿದುಳಿ೮ದ ವಸ್ತುಗಳನ್ನು ಬಳಸಿ ಈ ಮಾದರಿ ರೂಪುಗೊಳ್ಳುತ್ತಿದೆ. ಪ್ರಜ್ವಲ್ ರೈ ಹಾಗೂ ಸುದರ್ಶನ್ ರೈ ಇವರು ದರ್ಬೆಯ ಆರಾಧ್ಯ ಆರ್ಕೇಡ್‌ನಲ್ಲಿ ಆರಂಭಿಸಿರುವ ವಿಶೇಷ ಸಂಸ್ಥೆಯಿದು. ಇದುವೇ ಇ೩ ವುಡ್ ಸ್ಟೋರ್.
ಆಧುನಿಕ ಭರಾಟೆಲ್ಲಿ ಪ್ಲಾಸ್ಟಿಕ್ ಜತೆಗೆಮರದ ತ್ಯಾಜ್ಯಗಳನ್ನೂ ಮರುಬಳಕೆ ಮಾಡುವ ಅನಿವಾರ್ಯತೆ ಇದೆ. ಈ ನಿಮಿತ್ತ ಹೊಸ ಅನ್ವೇಷಣೆ, ಪರಿಸರ ಸಂರಕ್ಷಣೆ, ಜಾಗತಿಕ ಮಟ್ಟದಲ್ಲಿ ಬದಲಾವಣೆಯ ಅಗತ್ಯತೆಯೂ ಇದೆ. ಹೀಗಾಗಿ ಸೃಜನಾತ್ಮಕ ದಾರಿಯೊಂದಿಗೆ ಪಾರದರ್ಶಕ ಹಾಗೂ ಸಂರಕ್ಷಣೆ ಜೊತೆ ವ್ಯವಹಾರದ ಧ್ಯೇಯವನ್ನಿಟ್ಟುಕೊಂಡು, ಕ್ರಿಯಾಶೀಲತೆಯೊಂದಾz ಮರ ರೂಪದ ಉತ್ಪಾದಿತ ಅವಶ್ಯಕತೆಗಳ ಪೂರೈಕೆಗಾಗಿ ಸ್ಥಾಪಿತಗೊಂಡಿರುವ ಇ೩ ವುಡ್ ಸ್ಟೋರ್ ಹೊಸದಾಗಿ ಶುಭಾರಂಭಗೊAಡಿತು.
ನೂತನ ಮಳಿಗೆಯನ್ನು ಎಮ್.ರವೀಂದ್ರ ಶೆಟ್ಟಿ ಹಾಗೂ ದಯಾವತಿ ಆರ್ ಶೆಟ್ಟಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ವೇಳೆ ಶ್ಯಾಮ ಜ್ಯುವೆಲ್ಸ್ ಪ್ರೆöÊವೇಟ್ ಲಿಮಿಟೆಡ್‌ನ ವ್ಯಾವಹಾರಿಕ ನಿದೇಶಕರಾದ ಕೃಷ್ಣಪ್ರಸಾದ್ ಮುಳಿಯ, ಆರಾಧ್ಯ ಆರ್ಕೇಡ್ ಮತ್ತು ಅಶ್ವಿನಿ ಹೋಟೇಲಿನ ನಿರ್ದೇಶಕರಾದ ಕರುಣಾಕರ್ ರೈ, ಜೆಸಿಐ ಪುತ್ತೂರು ಅಧ್ಯಕ್ಷ ವೇಣುಗೋಪಾಲ್ ಎಸ್ ಜೆ, ಮತ್ತಿತರರು ಉಪಸ್ಥಿತರಿದ್ದರು.