ವಿಟ್ಲ : ಪರಿಸರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಹಲವು ಸಂಘ ಸಂಸ್ಥೆಗಳಿಗೆ, ಹಿರಿಯರ ಬಳಿ ಮತಯಾಚಿಸಿ ಚುನಾವಣಾ ಪ್ರಚಾರ ನಡೆಸಿದರು.

ವಿಟ್ಲದ ಗೇರು ಬೀಜ ಸಂಸ್ಕರಣಾ ಕೇಂದ್ರಗಳಾದ ವೆಂಕಟೇಶ್ವರ ಕ್ಯಾಶ್ಯೂಸ್, ಶಾರದಾ ಕ್ಯಾಶ್ಯೂಸ್, ಹಾಳೆ ಬಟ್ಟಲು ತಯಾರಿಕಾ ಕೇಂದ್ರ ಇಕೋ ವಿಷನ್ ಗೆ ಭೇಟಿ ನೀಡಿ ಮತಯಾಚಿಸಿದರು.

ಎರುಂಬುವಿನಲ್ಲಿ ನಡೆಯುತ್ತಿರುವ ನೇಮೋತ್ಸವ, ಕುದ್ದುಪದವು, ಅನ್ನಮೂಲೆ, ವಿಟ್ಲ ನಗರದ ಹಿರಿಯ ಕಾರ್ಯಕರ್ತರು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.


























