ಪುತ್ತೂರು : ನಗರ ಸಭೆಯ ಚಾಲಕ ಅಶೋಕ್ ರವರ ವಾಹನ ಅಪಘಾತಗೊಂಡಿದ್ದ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಪಕ್ಷೇತರ ಅರುಣ್ ಕುಮಾರ್ ಪುತ್ತಿಲ ರವರು ಉಪಚರಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ ಘಟನೆ ಹಾರಾಡಿಯಲ್ಲಿ ನಡೆದಿದೆ.

ಹಾರಾಡಿ ಸಮೀಪ ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಪುತ್ತೂರು ನಗರ ಸಭೆಯ ಚಾಲಕರಾಗಿರುವಂತಹ ಅಶೋಕ್ ಗಾಯಗೊಂಡಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಅರುಣ್ ಕುಮಾರ್ ಪುತ್ತಿಲ ರವರು ಗಾಯಗೊಂಡ ಅಶೋಕ್ ರನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು.
























