ಪುತ್ತೂರು : ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿಗೊಂಡ ಸ್ಥಳಕ್ಕೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಭೇಟಿ ನೀಡಿದರು.

ಲೋಕೇಶ್ ಮೇರ್ಲ ಎಂಬವರ ಮನೆಗೆ ಮರ ಬಿದ್ದು, ಸಂಪೂರ್ಣ ಛಾವಣಿ ಹಾನಿಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪುತ್ತಿಲ ರವರು ತಮ್ಮಿಂದಾದ ಧನ ಸಹಾಯವನ್ನು ಮಾಡಿದರು.

ಪುತ್ತೂರಮೂಲೆ ಸಂತೋಷ್ ಕುಮಾರ್ ಎಂಬವರ ಮನೆಗೆ ಮರ ಬಿದ್ದು ಹಾನಿಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ತಮ್ಮಿಂದಾದ ಧನ ಸಹಾಯವನ್ನು ಮಾಡಿದರು.





























