‘ಸೋತರೂ ಗೆದ್ದ ಪುತ್ತಿಲ’, ‘ತುಳುನಾಡಿಗೆ ಪುತ್ತಿಲ’ ಸದ್ಯ ಈ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದುತ್ವದಡಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದ ಅರುಣ್ ಕುಮಾರ್ ಪುತ್ತಿಲ ರವರು ಕೊನೆವರೆಗೂ ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದು, 4 ಸಾವಿರ ಮತಗಳ ಅಂತರದಲ್ಲಿ ಪರಾಜಯವನ್ನಪ್ಪಿದ್ದರು. ಈ ವಿಚಾರ ಅವರ ಅಭಿಮಾನಿ ಬಳಗಕ್ಕೆ ತೀವ್ರ ಬೇಸರವನ್ನುಂಟು ಮಾಡಿದೆ. ಆದರೇ ಓರ್ವ ಸಾಮಾನ್ಯ ವ್ಯಕ್ತಿ ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಿ ಕೆಲವೇ ಮತಗಳ ಅಂತರ ಸೋಲನ್ನುನ್ನಭವಿಸಿರುವುದು ಸಾಮಾನ್ಯ ವಿಷಯವಲ್ಲ ಎಂಬುದು ಎಲ್ಲರ ಮಾತಾಗಿದೆ.

ಪುತ್ತೂರು ಮಾತ್ರವಲ್ಲದೇ ಹತ್ತೂರಲ್ಲೂ ಪುತ್ತಿಲ ರವರ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಸಂಸದ ಅಭ್ಯರ್ಥಿಯಾಗಿ ಪುತ್ತಿಲ ರನ್ನು ಘೋಷಣೆ ಮಾಡುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲದೇ ರಾಷ್ಟ್ರ ಮಟ್ಟದಲ್ಲಿಯೂ ಪುತ್ತಿಲ ಬಗ್ಗೆ ಸುದ್ದಿಯಾಗುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಸೋಲುಂಡಿದ್ದಾರೆ. ಆದರೆ ದಾಖಲೆ ಸಂಖ್ಯೆಯ ಮತಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕಣಕ್ಕಿಳಿಸಲು ಅಭಿಮಾನಿಗಳು ತೀರ್ಮಾನಿಸಿದಂತೆ ಕಾಣುತ್ತಿದೆ.
ಅರುಣ್ ಕುಮಾರ್ ಪುತ್ತಿಲ ಅವರ ಹೆಸರಿನಲ್ಲಿ ಈಗಾಗಲೇ ‘ಡಿ.ಕೆ.2024 ಎಂ.ಪಿ ಅರುಣಣ್ಣ’ ಎಂಬ ವಾಟ್ಸಪ್ ಗ್ರೂಪ್ ಗಳು ರಚನೆಯಾಗಿದೆ. ಈಗಾಗಲೇ ಹಲವು ಕಾರ್ಯಕರ್ತರು ಈ ಗ್ರೂಪ್ ಜಾಯಿನ್ ಆಗಿದ್ದಾರೆ. ಇದು ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭಾ ಚುನಾವಣೆ ಸ್ಪರ್ಧಿಸುವ ಮುನ್ಸೂಚನೆಯನ್ನು ತೋರಿಸುತ್ತಿದೆ.
ಪುತ್ತಿಲ ಬಗ್ಗೆ ಏನಂದ್ರು ದೀಪು ಶೆಟ್ಟಿಗಾರ್..!!?

ಒಬ್ಬ ವ್ಯಕ್ತಿ ಪಕ್ಷೇತರವಾಗಿ ನಿಂತು ಪಕ್ಷವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬಂದು ನಿಂತಿದ್ದಾನೆ ಅಂದ್ರೆ ಆ ವ್ಯಕ್ತಿ ಎದುರು ಸಂಘಟನೆ ಸೋತಿದೆ. ರಾಜಕೀಯ ವಿಷಯದಲ್ಲಿ ನಾನಿಲ್ಲ ಆದ್ರೂ ನಾನು ಇವತ್ತು ತುಂಬಾ ಸಂತೋಷ ಪಡುತ್ತೇನೆ. ಯಾಕಂದ್ರೇ ಜನರ ಹೃದಯವನ್ನು ರಾಜಕೀಯವಿಲ್ಲದೆ ಗೆಲ್ಲುವುದು ಎಂದರೆ ಗ್ರೇಟ್.., ದಕ್ಷಿಣ ಕನ್ನಡ ಜಿಲ್ಲೆಯ ಜನರ ಹೃದಯವನ್ನು ಗೆಲ್ಲಬೇಕು ಅಂದ್ರೆ ಅವರ ಹೃದಯದಲ್ಲಿ ಧಮ್ ಇರಬೇಕು. ರಾಷ್ಟ್ರೀಯ ಪಕ್ಷಗಳ ಎದುರಲ್ಲಿ ನಿಂತು ಪ್ರಬಲ ಪೈಪೋಟಿಯನ್ನು ನೀಡಿದ್ದಾರೆಂದರೆ ಆ ವ್ಯಕ್ತಿ ನಿಜವಾಗಿಯೂ ಗ್ರೇಟ್ ಎಂದಿದ್ದಾರೆ.
























