ಪುತ್ತೂರು : ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ರವರ ಭಾವಚಿತ್ರಗಳನ್ನು ಮಾನಹಾನಿ, ತೇಜೋವಧೆ ಮಾಡುವಂತಹ ಫ್ಲೆಕ್ಸ್ ಮೂಲಕ ಅಳವಡಿಸಿ ಸಾರ್ವಜನಿಕ ಸ್ಥಳದಲ್ಲಿ ಭಾವಚಿತ್ರಗಳಿಗೆ ಚಪ್ಪಲಿ ಹಾರವನ್ನು ಹಾಕಿ ಕೆಳಭಾಗದಲ್ಲಿ “ನೊಂದ ಹಿಂದೂ ಕಾರ್ಯಕರ್ತರು” ಎಂಬ ಪ್ಲೆಕ್ಸ್ ನ್ನು ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರಿಮೊಗರಿನ ವಿಶ್ವನಾಥ್ ಮತ್ತು ಮಾಧವ ಪೊಲೀಸ್ ವಶದಲ್ಲಿರುವವರು.
ನಗರಸಭೆ ಪೌರಾಯುಕ್ತರಾದ ಮಧು ಎಸ್ ಮನೋಹರ್ ಹಾಗೂ ಪುತ್ತೂರು ಬಿಜೆಪಿ ಮುಖಂಡರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದರು.
ಬಿಜೆಪಿ ಪ್ರಮುಖರು ಆರೋಪಿಗಳ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..
























