ಪುತ್ತೂರು : ನಿಲ್ಲಿಸಿದ್ದ ಬೈಕ್ ಗಳಿಂದ ಪೆಟ್ರೋಲ್ ಕದಿಯುತ್ತಿದ್ದಾಗ ಸಾರ್ವಜನಿಕರು ಖದೀಮರನ್ನು ಹಿಡಿಯಲು ಯತ್ನಿಸಿದ ಘಟನೆ ಪುತ್ತೂರು ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಲಾಗುತ್ತಿದ್ದ ಬೈಕ್ ಗಳಿಂದ ಖದೀಮರು ಪೆಟ್ರೋಲ್ ಕಳವುಗೈಯುತ್ತಿದ್ದು, ಈ ಬಗ್ಗೆ ತಿಳಿದ ಸಾರ್ವಜನಿಕರು ಖದೀಮರನ್ನು ಹಿಡಿಯಲು ಪ್ರಯತ್ನಿಸಿದ್ದರು.
ಆದರೇ ಸಾರ್ವಜನಿಕ ಪ್ರಯತ್ನ ವಿಫಲವಾಗಿದ್ದು, ಪೆಟ್ರೋಲ್ ಕಳವುಗೈಯುತ್ತಿದ್ದ ಮೂವರು ಪರಾರಿಯಾಗಿದ್ದಾಗಿ ತಿಳಿದು ಬಂದಿದೆ.
























