ಪುತ್ತೂರಿನ ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ (ರಿ) ಪುತ್ತೂರು ಹಾಗೂ ಹೊಸಬೆಳಕು ಬಡವರ ಆಶಾ ಕಿರಣ ಮತ್ತು ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇವರ ಸಹಭಾಗಿತ್ವದಲ್ಲಿ ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅವರ ಮನೆಗೆ ಭೇಟಿ ಕೊಟ್ಟು ಅವರ ಮನೆಯಲ್ಲಿ ಅವರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ 65 ಪ್ರತಿಭೆಗಳ ಕಾರ್ಯಕ್ರಮ ಕೊಟ್ಟು ಅವರನ್ನು ಗುರುತಿಸಿ ಸನ್ಮಾನಿಸಿ ಈಗ ತನ್ನ 77 ಹಾಗೂ 78ನೇ ಸನ್ಮಾನ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಎಂಬಲ್ಲಿ ಆದ್ಯ ಭಂಡಾರಿ ಹಾಗೂ ಅಪೂರ್ವ ರೈ ಎಂಬ ಸಣ್ಣ ವಯಸ್ಸಿನ ಪ್ರತಿಭೆಗಳಿಗೆ ನಡೆಯಿತು.

ತನ್ನ ಸಣ್ಣ ವಯಸ್ಸಿನಲ್ಲಿ ಸನ್ಮಾನ ಪಡೆದು ಮುಂದೆ ಅವರು ರಾಜ್ಯ ರಾಷ್ಟ್ರ ಹಾಗೂ ಅಂತರ್ರಾಷ್ಟ್ರ ಮಟ್ಟದಲ್ಲಿ ಬೆಳಗಲಿ ಎಂದು ಜೆಪಿ ಸಂತೋಷ್ ಮುರ, ಕಲಾವಿದ ಕೃಷ್ಣಪ್ಪ ಪೂಜಾರಿ ಶಿವನಗರ, ರಕ್ತದಾನಿ ನವೀನ್ ಸಿಟಿಗುಡ್ಡೆ, ಪುತ್ತೂರು ಹಾಗೂ ಶ್ರೀ ಕೃಷ್ಣ ಯುವಕಮಂಡಲಅಧ್ಯಕ್ಷ ರಾಜು ಬಿ. ಗೌಡ ಹಾರೈಸಿದರು.

























