ಪುತ್ತೂರು : ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಸೋಲಿನಲ್ಲೂ ಇತಿಹಾಸ ಕಂಡ ಅರುಣ್ ಕುಮಾರ್ ಪುತ್ತಿಲ ರವರ ನೇತೃತ್ವದಲ್ಲಿ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಈಶ್ವರಮಂಗಲದಲ್ಲಿ ನಡೆಯಿತು.

ಸಭೆಯು ಪ್ರಜ್ವಲ್ ರವರ ಪ್ರಶಿಕಾಪುರ ಮನೆಯಲ್ಲಿ ನಡೆಯಿತು.
ಅರುಣ್ ಕುಮಾರ್ ಪುತ್ತಿಲ ರವರು ಕಾರ್ಯಕರ್ತರನ್ನು ಉದ್ದೇಶಿಸಿ ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ನಮ್ಮ ಬಲ ಗಟ್ಟಿ ಪಡಿಸಬೇಕೆಂದು ತಿಳಿಸಿದರು. ಜಿಲ್ಲೆಯ ಪ್ರತಿ ಮೂಲೆಗಳಿಂದ ಕರೆಗಳು ಬರುತ್ತಿದ್ದು, ಎಲ್ಲಾ ಕಡೆಗಳಿಂದ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.

ಯಾವುದೇ ರಾಜಕಾರಣಿಗಳ ಬಗ್ಗೆ ಕೀಳಾಗಿ ಬರೆಯಬೇಡಿ ಎಂದು ಹೇಳಿದರು.
ಸುಮಾರು 250ಕ್ಕೂ ಅಧಿಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


























