ಪುತ್ತೂರು : ಕಾರು ಅಪಘಾತಕ್ಕೀಡಾದ ವೇಳೆ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ತಮ್ಮ ಕಾರಿನಲ್ಲೇ ಅವರನ್ನು ಕಾರ್ಯಕ್ರಮಕ್ಕೆ ಕಳುಹಿಸುವ ಮೂಲಕ ಅರುಣ್ ಕುಮಾರ್ ಪುತ್ತಿಲ ರವರು ಮಾನವೀಯತೆ ಮೆರೆದಿದ್ದಾರೆ.

ಶುಂಠಿಕೊಪ್ಪದಿಂದ ಮುಡಿಪಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ನಿವೃತ್ತ ಬಿ.ಎಸ್.ಎನ್.ಎಲ್ ಆಫೀಸರ್ ಈಶ್ವರ ಎಂಬುವವರ ಕಾರು ಮುಕ್ರಂಪಾಡಿಯಲ್ಲಿ ಅಪಘಾತಕ್ಕೀಡಾಗಿದ್ದು, ಈ ವೇಳೆ ಅರುಣ್ ಪುತ್ತಿಲ ರವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ತಮ್ಮ ವಾಹನದಲ್ಲಿ ಮುಡಿಪಿನ ಧಾರ್ಮಿಕ ಕಾರ್ಯಕ್ರಮಕ್ಕೆ ಕಳುಹಿಸಿದರು.
ಈಶ್ವರ ರವರು ವಿಶ್ವ ಹಿಂದೂ ಪರಿಷದ್ ಶುಂಠಿಕೊಪ್ಪ ಘಟಕದ ಕಾರ್ಯದರ್ಶಿಯಾಗಿದ್ದಾರೆ.


























