ಪುತ್ತೂರು : ವಿಧಾನಸಭಾ ಚುನಾವಣೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ಬಳಿಕ ಪುತ್ತಿಲ ಪರಿವಾರ ಅಸ್ತಿತ್ವಕ್ಕೆ ಬಂದಿದೆ.

ದರ್ಬೆಯಿಂದ ದೇವರಮಾರು ಗದ್ದೆಯವರೆಗೆ ನಡೆದ ‘ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ’ ‘ಕಾಲ್ನಡಿಗೆ ಜಾಥಾ’ದ ನಂತರ ನಡೆದ ಸೇವಾ ಸಮರ್ಪಣಾ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಲೋಗೋ ಅನಾವರಣ ಮಾಡಲಾಯಿತು.
ಪ್ರಸನ್ನ ಕುಮಾರ್ ಮಾರ್ತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಸಂತ ಲಕ್ಷ್ಮೀ, ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ರಾಜಶೇಖರ್ ಉಪಸ್ಥಿತರಿದ್ದರು. ಉಮೇಶ್ ಕೊಡಿಬೈಲು ಸ್ವಾಗತಿಸಿದರು.
ಪುತ್ತಿಲ ಪರಿವಾರದ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತಾ, ಕಾರ್ಯದರ್ಶಿಯಾಗಿ ಉಮೇಶ್ ಗೌಡ ರನ್ನು ಆಯ್ಕೆ ಮಾಡಲಾಯಿತು.




























