ಪುತ್ತೂರು : ಬ್ಯಾನರ್ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ವಿಚಾರದ ಬಗ್ಗೆ ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ಕಳದ ಶ್ರೀಕಾಂತ್ ಶೆಟ್ಟಿ ರವರು ಪ್ರತಿಕ್ರಿಯಿಸಿದ್ದು, ಹಿಂದುತ್ವದ ಅನೇಕ ಕಾರ್ಯಕರ್ತರಿಗೆ ಪ್ರೇರಣೆಯನ್ನು ನೀಡುವ ಕೇಂದ್ರ ಎಂದರೆ ಅದು ಪುತ್ತೂರು. ಕಾರ್ಯಕರ್ತರ ಮೇಲೆ ಪುತ್ತೂರಿನಲ್ಲಿ ನಡೆದಿರುವ ದೌರ್ಜನ್ಯವನ್ನು ನೋಡಿದಾಗ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬಂತಹ ಆತಂಕ ನಮ್ಮನ್ನು ಕಾಡುತ್ತದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪೊಲೀಸರ ವರ್ತನೆ ಕೂಡ ಬದಲಾಗಿದೆ. ಅವರ ಮಾತಿನ ಶೈಲಿಯೂ ಬದಲಾವಣೆಯಾಗಿದೆ. ಸರಕಾರ ಬದಲಾವಣೆಯಾದರೆ ಅದರ ನೇರ ಪರಿಣಾಮ ಬೀರುವುದು ಕಾರ್ಯಕರ್ತರ ಮೇಲೆಯೇ ಹೊರತು.., ಯಾವ ನಾಯಕರ ಮೇಲೂ ಅಲ್ಲ, ಅವರು ವಿಧಾನ ಸಭಾ ಕ್ಯಾಂಟೀನ್ ನಲ್ಲಿ ಒಟ್ಟಾಗಿ ಕಾಫಿ-ತಿಂಡಿ ಮಾಡುತ್ತಾ ಒಳ್ಳೆಯ ರೀತಿಯಲ್ಲಿರುತ್ತಾರೆ. ಸಂಘಟನೆಗಾಗಿ ಕೆಲಸ ಮಾಡಿ ಕೇಸ್ ಮೈ ಮೇಲೆ ಹಾಕಿಕೊಂಡ ಕಾರ್ಯಕರ್ತರು ಐದು ವರ್ಷಗಳ ಕಾಲ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ.
ಬಿಜೆಪಿ ಕೆಲ ನಾಯಕರ ವರ್ತನೆಯನ್ನು ಗಮನಿಸಿದಾಗ ನಮಗೆ ಅನಿಸುವುದು ತಾವು ಹತ್ತಿ ಬಂದ ಹಿಂದುತ್ವದ ಹಾಗೂ ಸಂಘ ಪರಿವಾರದ ವಿವಿಧ ಜವಾಬ್ದಾರಿಯನ್ನು ಇನ್ಯಾರೋ ಹತ್ತಿ ಬರುತ್ತಾನೆ ಎಂದು ಹಿಂದುತ್ವದ ಸಂಘಟನೆಯ ಏಣಿಯನ್ನು ತುಳಿಯುವಂತಹ, ಅದನ್ನು ಧಮನ ಮಾಡುವಂತಹ ಕೆಲಸವನ್ನು ಬಿಜೆಪಿಯ ಕೆಲವು ನಾಯಕರುಗಳು ಮಾಡುತ್ತಿದ್ದಾರೆ.
ಕೇವಲ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ್ದಾರೆಂದು ಈ ರೀತಿಯಾಗಿ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಡ್ತಾರೆಂದರೆ ಇದರ ಹಿಂದೆ ಯಾವುದೋ ಪ್ರಭಾವಿಗಳು ಕೆಲಸ ಮಾಡಿದ್ದಾರೆ. ಅವರು ಯಾರು ಎಂಬುದನ್ನು ಸಂಘ-ಪರಿವಾರದ ಹಿರಿಯರು ಗಮನಿಸಬೇಕು. ಮತ್ತು ಅವರ ವಿರುದ್ಧ ಸಂಘ-ಪರಿವಾರದ ಹಿರಿಯರೇ ಕಠಿಣ ಕ್ರಮಕೈಗೊಳ್ಳಬೇಕು.
ಇಲಾಖಾ ತನಿಖೆಯ ಹೆಸರಿನಲ್ಲಿ ಅವರನ್ನು ಅಮಾನತಿನಲ್ಲಿರಿಸಿದ್ದಾರೆ. ಅಮಾನತಿನಲ್ಲಿರಿಸಿದರೆ ಸಾಕಾಗುವುದಿಲ್ಲ.., ಈ ರೀತಿಯ ರಾಕ್ಷಸೀಯ ಪ್ರವೃತ್ತಿಯನ್ನು ತೋರಿಸಿದವರು ಸರಕಾರದ ತೆರಿಗೆ ಹಣವನ್ನು ಬಳಸಿಕೊಂಡು 5,6 ತಿಂಗಳು ಮನೆಯಲ್ಲಿ ಬಿಟ್ಟಿ ಊಟ ಮಾಡುವ ಅಗತ್ಯವಿಲ್ಲ.., ಕೂಡಲೇ ಅವರನ್ನು ವಜಾ ಮಾಡಬೇಕು. ಇನ್ನು ಮುಂದೆ ಈ ರೀತಿಯ ಕೆಲಸ ಮಾಡಲು ಯಾವುದೇ ಅಧಿಕಾರಿಗಳು ಮುಂದಾಗಬಾರದು ಈ ರೀತಿಯಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ.
ಡಿ.ವಿ. ಸದಾನಂದ ಗೌಡರ ಬಳಿ ನಾವು ಹೇಳುವುದು ಇಷ್ಟೇ ನೀವು ರಾತ್ರಿ ಹೊತ್ತು ಯಾರ್ಯಾರದ್ದೋ ಮನೆಯ ಹೆಂಗಸರಿಗೆ ಫೋನ್ ಮಾಡಿ ತೊಡೆ ತೋರ್ಸು ತೊಡೆ ತೋರ್ಸು ಅಂತ ಹೇಳ್ತೀರಾ.., ನೀವು ಒಮ್ಮೆ ಪುತ್ತೂರು ಆಸ್ಪತ್ರೆಗೆ ಬಂದು ನಿಮ್ಮ ಕಾರ್ಯಕರ್ತರ ತೊಡೆ ಹೇಗೆ ಆಗಿದೆ ಅಂತಾ ನೋಡ್ಬೇಕು. ಆ ಕಾರ್ಯಕರ್ತರ ಸ್ಥಿತಿ ಹೇಗಿದೆ ಅಂತ ಒಮ್ಮೆ ನೋಡ್ಬೇಕು.
ಈ ಘಟನೆಯ ಬಗ್ಗೆ ಸೂಕ್ತವಾದಂತಹ ತನಿಖೆ ನಡೆಯಬೇಕು. ಸರಿಯಾದ ತನಿಖೆ ನಡೆಸದೆ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ನಾವು ಹೋರಾಟ ನಡೆಸಬೇಕಾಗುತ್ತದೆ ಎಂದರು.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..




























