ಪುತ್ತೂರು: ಶತಮಾÀನಗಳ ಇತಿಹಾಸವಿರುವ , ತನ್ನದೇ ಆದ ವೈಭವದ ಚರಿತ್ರೆಯನ್ನು ಹೊಂದಿರುವ ಮಸೀದಿಯೊಂದು ಪುತ್ತೂರು ತಾಲೂಕಿನ ಅರಿಯಡ್ಕದಲ್ಲಿ ಪುನರ್ ನಿರ್ಮಾಣಗೊಂಡು ,ಸುಂದರವಾಗಿ ಕಂಗೊಳಿಸುತ್ತಾ, ಧರ್ಮ ಸಂದೇಶವ ಸಾರುತ್ತಲಿದೆ. ಇದುವೇ ಅರಿಯಡ್ಕ ಜುಮಾ ಮಸ್ಜಿದ್.
ಹಿಂದೆ ಮಾಡಾವು, ತಿಂಗಳಾಡಿ, ಅರಿಕ್ಕಿಲ, ಕಟ್ಟತ್ತಾರ್, ಗಟ್ಟಮನೆ, ಕುಂಬ್ರ, ಬದ್ರಿಯಾನಗರ , ಪರ್ಪುಂಜ, ಉಜಿರೋಡಿ,ಮೈದಾನಿಮೂಲೆ,ಶೇಕಮಲೆ ಮುಂತಾದ ಪ್ರದೇಶಗಳ ಜನರಿಗೆ ಪುರಾತನ ಮಸೀದಿ ಎಂದೇ ವರ್ಣಿಸಬಹುದಾದ ಈ ಮಸೀದಿಯಲ್ಲಿ ,ದೀನೀ ಕೈಂಕರ್ಯಗಳಲ್ಲಿ ಅಲ್ಲಿನ ಧಾರ್ಮಿಕ ಚಟುವಟಿಕೆಗಳಿಗೆ ಪರಸ್ಪರ ತೋಳು ಸೇರಿಸುತ್ತಿದ್ದ ಸಜ್ಜನರ ಪಾಲಿನ ನೇತೃತ್ವವಾಗಿದ್ದ ಪಯಂದೂರು ಅಹ್ಮದ್ ಪಟ್ಟೇದಾರ್ ಎಂಬವರು ಅಂದಿನ ಮೊಕ್ತೇಸರರಾಗಿದ್ದರು..ಬಳಿಕ ಅಹ್ಮದ್‌ರವರಿಂದ ಅವರ ತೃತೀಯ ಪುತ್ರರಾಗಿರುವ ಪಯಂದೂರು ಮಮ್ಮುಂಞ ಎಂಬವರಿಗೆ ಅರಿಯಡ್ಕ ಮಸೀದಿಯ ಮೊಕ್ತೇಸರ ಸ್ಥಾನ ಒಲಿದುಬಂದಿತ್ತು. ಇವರ ಕಾಲಾವಧಿಯಲ್ಲಿ ಅಂದರೆ 1950ರ ಸುಮಾರಿಗೆ ಮಸೀದಿಯ ಮುಳಿ ಹುಲ್ಲಿನ ಮಾಡು ಹಂಚಿನ ಮಾಡಾಗಿ ಪರಿವರ್ತನೆಗೊಂಡಿತ್ತು. ಮಮ್ಮುಂಞ ಹಾಜಿಯವರ ಯುಗಾಂತ್ಯದ ಬಳಿಕ ಅರ್ಹವಾಗಿಯೇ ಅವರ ಪುತ್ರ ಅಬ್ದುಲ್ ರಹಮಾನ್‌ರವರಿಗೆ ಅಲ್ಲಿನ ನಾಯಕತ್ವ ಒದಗಿ ಬಂದಿತ್ತು.ಸಣ್ಣ ಪ್ರಾಯದಲ್ಲೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಿದ್ಗದ ಅಬ್ದುಲ್ ರಹಿಮಾನ್ 1980ರಿಂದ ಈವರೆಗೂ ಅರಿಯಡ್ಕ ಮಸೀದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಅವರ ನೇತೃತ್ವದಲ್ಲಿ ಜಮಾಅತ್ ಕಮಿಟಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅರಿಯಡ್ಕ ಮಸೀದಿಯಲ್ಲಿ ೪೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಅರಿಯಡ್ಕ ಕುಂಞ ಅಹ್ಮದ್ ಮುಕ್ರಿಕ ಎಂಬ ಮಹಾನುಭಾವರ ನಿವೃತ್ತಿಯ ಬಳಿಕ ಅವರ ಪುತ್ರ ಅರಿಯಡ್ಕ ಅಬ್ದುಲ್ ಖಾದರ್ ಮುಕ್ರಿಕ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದದರು,. ನಂತರ ನಿಡ್ಯಾಣ ಉಮರ್ ಮುಸ್ಲಿಯಾರ್ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮಸೀದಿಯ ಜತೆಗೆ ಮದರಸ ಶಿಕ್ಷಣವನ್ನೂ ನೀಡುತ್ತಿದ್ದ ಈ ಸ್ಥಳದಲ್ಲಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಪಳ್ಳಿ ದರ್ಸನ್ನೂ ಪ್ರಾರಂಭಿಸಲಾಗಿತ್ತು. ಹಲವು ಉನ್ನತ ಮಟ್ಟದ ಧಾರ್ಮಿಕ ಪಂಡಿತರ ಪಾದಸ್ಪರ್ಶದಿಂದ ಅರಿಯಡ್ಕ ಊರು ಪುನೀತಗೊಂಡಿತ್ತು.
ಇದೀಗ ಖ್ಯಾತ ಯುವ ಪಂ<ಡಿತ, ವಾಗ್ಮಿ, ಚಿಂತಕ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಖತೀಬ್ ಆಗಿ ಸೇವೆ ಸಲ್ಲಿಸುತ್ತಿದ್ದು ಜಮಾಅತ್‌ನ ಎಲ್ಲಾ ಕಾರ್ಯಗಳಲ್ಲೂ ತನ್ನದೇ ಆದ ವಿಶೇಷ ಕೊಡುಗೆಯನ್ರನು ನೀಡುತ್ತಿದ್ದಾರೆ. ಈ ಮಸೀದಿ ನಿರ್ಮಾಣಕ್ಕೆ ಊರ , ಪರವೂರ ಹಲವಾರು ದಾನಿಗಳು ಸಹಾಯಹಸ್ತ ಚಾಚಿದ್ದು ಪರವೂರ ವ್ಯಕ್ತಿಯೊಬ್ಬರಿಂದ ಗರಿಷ್ಠ ಮಟ್ಟದ ಧನ ಸಹಾಯ ಪಡೆಯುವಲ್ಲೂ ಅಬ್ದುಲ್ ಜಲೀಲ್ ಸಖಾಫಿ ಉಸ್ತಾದರೇ ಪ್ರಮುಖ ಕಾರಣ ಎಂಬುದು ಉಲ್ಲೇಖನೀಯ. ಕಳೆದ ವರ್ಷ ಆಗಿನ ತಾಜುಲ್ ಫುಖಾಹಾಹ್ ಬೇಕಲ್ ಉಸ್ತಾದರ ದಿವ್ಯ ಹಸ್ತದಿಂದ ಶಿಲಾನ್ಯಾಸಗೊಂಡಿದ್ದ ಮಸೀದಿ ಅ.28ರಂದು ಶುಭಾರಂಭಗೊ0ಡಿತು.
ಪುತ್ತೂರು ಮುರ‍್ರಿಸ್ ಬಹು ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಮಸೀದಿಯನ್ನು ಉದ್ಘಾಟನೆಗೊಳಿಸಿದರು. ಉಡುಪಿ,ಚಿಕ್ಕಮಗಳೂರು,ಹಾಸನ ಖಾಝಿ ಬಹು ಝೈನುಲ್ ಉಲಮಾ ಮಾಣಿ ಉಸ್ತಾದ್ ವಕ್ಫ್ ನಿರ್ವಹಣೆ ಮಾಡಿದರು. ಸಅದಿಯಾ ಅರೇಬಿಕ್ ಕಾಲೇಜಿನ ಪ್ರೊ. ಬಹು ಹುಸೈನ್ ಸದಿ ಕೆ ಸಿ ರೋಡ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ವಿದ್ಯುಕ್ತ ಚಾಲನೆ ನೀಡಿದರು. ಜೆ ಎಂ ಅರಿಯಡ್ಕದ ಖತೀಬರಾಗಿರುವ ಬಹು ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜುಮಾ ಮಸ್ಜಿದ್ ಅರಿಯಡ್ಕದ ಅಧ್ಯಕ್ಷರಾಗಿರುವ ಜ.ಪಿ.ಎಂ.ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಈ ವೇಳೆ ಹಲವರು ಉಪಸ್ಥಿತರಿದ್ದರು.