ಪುತ್ತೂರು : ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಕಲ್ಲಾರೆ ಸಮೀಪ ನಡೆದಿದೆ.

ಮೃತರನ್ನು ಉಪ್ಪಿನಂಗಡಿ ಮೂಲದ ಮಂಜುನಾಥ್ ಎಂದು ಹೇಳಲಾಗುತ್ತಿದೆ.
ಕಲ್ಲಾರೆ ನವಾಜ್ ಕಾಂಪ್ಲೆಕ್ಸ್ ಮುಂಭಾಗ ಮಲಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮಂಜುನಾಥ್ ರವರು ನಿತ್ಯ ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದು, ಕಲ್ಲಾರೆ ಕಟ್ಟಡದ ಬಳಿಯೇ ಅವರು ಮಲಗುತ್ತಿದ್ದರು.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದರು..


























