ಪುತ್ತೂರು : ಉಪ್ಪಿನಂಗಡಿ ಪಿಯು ಕಾಲೇಜಿಗೆ ಸಂಬಂಧಪಟ್ಟಂತೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ಭರತ್ ಜೊತೆ ಶಾಸಕ ಅಶೋಕ್ ಕುಮಾರ್ ರೈ ರವರು ಮಾತುಕತೆ ನಡೆಸಿದರು.

ಕಾಲೇಜಿಗೆ ಹೊಸ ಕಟ್ಟಡ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಪಿಯು ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿದ್ದು ಇದರ ರೂಪುರೇಷೆಗಳ ಬಗ್ಗೆ ಇಂಜಿನಿಯರ್ ಜೊತೆ ಮಾತುಕತೆ ನಡೆಸಿದರು.
ಇನ್ನು ಎರಡು ಮೂರು ವರ್ಷದೊಳಗಡೆ ಮಾಡ್ರನ್ ಕಾಲೇಜು ತರ ಬದಲಾವಣೆ ಆಗ್ಬೇಕು.., ಸರಕಾರದಿಂದ ಬಂದ ಹಣವನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಬರುವ ಹಾಗೇ ಮಾಡ್ಬೇಕು. ಆ ರೀತಿ ಕಾಲೇಜು ನಿರ್ಮಾಣವಾಗ್ಬೇಕು ಎಂದು ಹೇಳಿದರು..


























