ನೂತನ ಸಂಸತ್ ಭವನ ಉದ್ಘಾಟನೆಗೆ ಸಜ್ಜಾಗಿದೆ. ಭಾನುವಾರ ಹೊಸ ಸಂಸತ್ ಭವನದ ಲೋಕಾರ್ಪಣೆಯಾಗ್ತಿದೆ. ಇದರ ನೆನಪಿಗಾಗಿ ಕೇಂದ್ರ ಸರ್ಕಾರ 75 ರೂ.ನ ನಾಣ್ಯ ಬಿಡುಗಡೆಯಾಗಲಿದೆ.
2020ರ ಡಿಸೆಂಬರ್ನಲ್ಲಿ ಆರಂಭವಾಗಿದ್ದ ನಿರ್ಮಾಣ ಕಾರ್ಯ ಎರಡೂವರೆ ವರ್ಷಗಳ ಬಳಿಕ ಮುಗಿದಿದೆ. ಸುಮಾರು 862 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸಂಸತ್ ಭವನ ಉದ್ಘಾಟನೆಯನ್ನು ಹಲವು ವಿಪಕ್ಷಗಳು ಬಹಿಷ್ಕಾರ ಮಾಡಿವೆ.
ನೂತನ ಕಟ್ಟಡಕ್ಕೆ ಚಾಲನೆ ನೀಡಲಿರುವ ನಮೋ
20 ವಿಪಕ್ಷಗಳ ಬಹಿಷ್ಕಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಭಾನುವಾರು ಉದ್ಘಾಟಿಸಲಿದ್ದಾರೆ. ಸುಮಾರು 25 ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಕೂಡ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.
ಸಮಾರಂಭದ ವೇಳಾಪಟ್ಟಿ :
- ಬೆಳಗ್ಗೆ 7.15 – ಸಂಸತ್ ಭವನಕ್ಕೆ ಆಗಮಿಸಲಿರುವ ಮೋದಿ
- ಬೆಳಗ್ಗೆ 7.30 – ಹೋಮ-ಹವನ ಪೂಜೆ ಆರಂಭ
- ಬೆಳಗ್ಗೆ 9 – ಸ್ಪೀಕರ್ ಪೀಠದ ಬಳಿ ರಾಜದಂಡ ‘ಸೆಂಗೊಲ್’ ಸ್ಥಾಪನೆ
- ಮಧ್ಯಾಹ್ನ 12 – ರಾಷ್ಟ್ರಗೀತೆಯೊಂದಿಗೆ ಸಮಾರಂಭ ಆರಂಭ
- ಮಧ್ಯಾಹ್ನ 12.10- ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಭಾಷಣ
- ಮಧ್ಯಾಹ್ನ 12.38- ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ
- ಮಧ್ಯಾಹ್ನ 1.05 – 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ
- ಮಧ್ಯಾಹ್ನ 1.10 – ಪ್ರಧಾನಿ ನರೇಂದ್ರ ಮೋದಿಯವರ ಭಾಷಣ
- ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ
- ಇದೇ ವೇಳೆ ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ 75 ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯವು ಈ ನಾಣ್ಯವನ್ನು ಸಿದ್ಧಪಡಿಸಿದೆ. ನಾಣ್ಯವೂ ಸಂಪೂರ್ಣ ವಿಶೇಷತೆಯಿಂದ ಕೂಡಿದೆ.




























