ದೆಹಲಿಯಲ್ಲಿ ಕ್ರೂರ ಪ್ರಿಯಕರನೊಬ್ಬ 16 ವರ್ಷದ ಯುವತಿಗೆ 20ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ರೋಹಿಣಿ ಸ್ಲಮ್ ಬಳಿ ನಡೆದಿದೆ.
ಕೃತ್ಯದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯು ಚಾಕುವಿನಿಂದ ಸುಮಾರು 20ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ.
20 ವರ್ಷದ ಶಾಹೀಲ್ ಎಂಬಾತ ಕೃತ್ಯ ನಡೆಸಿದ್ದಾನೆ. ಇವರಿಬ್ಬರು ರಿಲೇಷನ್ಶಿಪ್ನಲ್ಲಿದ್ದರು. ಹಲವು ದಿನಗಳಿಂದ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು ಎಂದು ವರದಿಯಾಗಿದೆ.
ಹತ್ಯೆಗೊಳಗಾದ ಯುವತಿಯು ಸಂಬಂಧಿಕರೊಬ್ಬರ ಪುತ್ರನ ಬರ್ತಡೇ ಆಚರಣೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನ ಆರೋಪಿ ಶಾಹೀಲ್ ತಡೆದಿದ್ದಾನೆ. ಮಾತ್ರವಲ್ಲ ಮಾತಿಗೆ ಮಾತು ಬೆಳೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಚಾಕುವಿನಿಂದ ಇರಿದು ಬಂಡೆ ಎತ್ತಿ ಹಾಕಿ ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪರಾರಿಯಾಗಿರುವ ಆರೋಪಿ ಸಾಹಿಲ್ನನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ.


























