ವಿಟ್ಲ : ಅಳಕೆಮಜಲು ನಿವಾಸಿ ಧೀರಜ್ ರವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಧೀರಜ್ ಇತ್ತೀಚಿಗೆ ಹಣಕಾಸಿನ ವಿಚಾರವಾಗಿ ತೊಂದರೆಯನ್ನು ಎದುರಿಸುತ್ತಿದ್ದು, ಈ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಧೀರಜ್ ತಂದೆ ನಾರಾಯಣ ನಾಯ್ಕ್ ದೂರಿನಲ್ಲಿ ತಿಳಿಸಿದ್ದಾರೆ.
ಮೇ.31 ರಂದು ಮಧ್ಯರಾತ್ರಿ ವೇಳೆ ಧೀರಜ್ ಸಹೋದರಿ ತಂದೆ ನಾರಾಯಣ ನಾಯ್ಕ್ ರವರಿಗೆ ಕರೆ ಮಾಡಿ ಧೀರಜ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಪ್ರಯತ್ನಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ಆಗಮಿಸಿದಾಗ ಧೀರಜ್ ಮೃತ ಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿರುತ್ತಾರೆ.
ಧೀರಜ್ ಇತ್ತೀಚೆಗೆ ಹಣಕಾಸಿನ ವಿಚಾರವಾಗಿ ತೊಂದರೆ ಇದ್ದ ಕಾರಣದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಇದಲ್ಲದೇ ಬೇರೆ ಯಾವುದೇ ಸಂಶಯವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 24/2023 ಕಲಂ:174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಾಗಿದೆ..