ಪುತ್ತೂರು : ದಿನೇಶ್ ಬೇಕರಿ ಮಾಲಕರಾಗಿದ್ದ ದಿನೇಶ್ (43) ರವರು ಮೂಡಬಿದ್ರೆಯ ಮನೆಯಲ್ಲಿ ಮೇ.31 ರಂದು ತಡರಾತ್ರಿ ನಿಧನರಾದರು.

ಬೇಕರಿ ಉದ್ಯಮದಲ್ಲಿ ಖ್ಯಾತರಾಗಿದ್ದ ದಿ.ಐತ್ತಪ್ಪ ಭಂಡಾರಿ ಅವರು
ಪುತ್ತೂರು ಬಸ್ ನಿಲ್ದಾಣದ ಬಳಿ, ಬೊಳುವಾರು ಸಮೀಪ ಸಹಿತ
ಮೂರು ದಿನೇಶ್ ಬೇಕರಿ ಸಂಸ್ಥೆಯನ್ನು ಹೊಂದಿದ್ದರು ಅವರ
ಅನಾರೋಗ್ಯದ ಸಂದರ್ಭದಲ್ಲಿ ಪತ್ನಿ ಭಾರತಿ ಮತ್ತು ಪುತ್ರ ದಿನೇಶ್
ಅವರು ಬೇಕರಿ ಉದ್ಯಮ ನಡೆಸುತ್ತಿದ್ದರು.
ಪರ್ಲಡ್ಕ ಕಲ್ಲಿಮಾರ್‌ನಲ್ಲಿ ಈ ಹಿಂದೆ ನೆಲೆಸಿದ್ದ ಅವರು ತಂದೆ ಮತ್ತು ತಾಯಿ ನಿಧನದ ಬಳಿಕ ಬೇಕರಿ ಉದ್ಯಮವನ್ನು ಬಿಟ್ಟು ಮೂಡಬಿದ್ರೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಮೇ.31ರಂದು ರಾತ್ರಿ ದಿನೇಶ್ ರವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ತೆರಳಿ ಅಲ್ಲಿಂದ ಚೇತರಿಕೆಗೊಂಡು ಮನೆಗೆ ಬಂದಿದ್ದ ಅವರು ತಡರಾತ್ರಿ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ
ಮೃತರು ಪತ್ನಿ, ಪುತ್ರ ಮತ್ತು ಸಹೋದರರನ್ನು ಅಗಲಿದ್ದಾರೆ.




























