ಪುತ್ತೂರು : ಸರಕಾರಿ ಶಾಲೆಗಳ ಪೈಕಿ ಪುತ್ತೂರು ತಾಲೂಕಿನಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹೆಗ್ಗಳಿಕೆ ಪಡೆದಿರುವ ಹಾರಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ.31ರಂದು ನಡೆದಿದ್ದು, ನೂತನ ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರವರು ಶಾಲಾ ಪ್ರಾರಂಭೋತ್ಸವನ್ನು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮ ಮುಗಿದ ಬಳಿಕ ಒತ್ತಡದ ಕಾರ್ಯಕ್ರಮಗಳಿದ್ದರೂ ಶಾಸಕರು ವಿದ್ಯಾರ್ಥಿಗಳ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದು ಸಣ್ಣ-ಸಣ್ಣ ಮಕ್ಕಳೊಂದಿಗೆ ಬೆರೆತು ಅವರ ಪರಿಚಯ ಮಾಡಿಕೊಂಡರು.

ತರಗತಿ, ಮನೆ ಎಷ್ಟು ದೂರ ಎಂದು ಮಕ್ಕಳ ಬಳಿ ವಿಚಾರಿಸಿದರು. ಮುಂದೆ ಕುಳಿತ ವಿದ್ಯಾರ್ಥಿಗಳನ್ನಷ್ಟೆ ಅಲ್ಲದೆ ಹಿಂದೆ ಕೂತ ವಿದ್ಯಾರ್ಥಿಗಳ ಬಳಿಗೂ ಹೋಗಿ ಅವರೊಂದಿಗೆ ಮಾತನಾಡಿದರು.
ಶಾಸಕರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ..






























