ಪುತ್ತೂರು : ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಅಧೀಕ್ಷಕರ ಕಚೇರಿಯಲ್ಲಿ ಬೀಳ್ಕೊಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಪೊಲೀಸ್ ಅಧೀಕ್ಷಕರಾದ ರಿಷ್ಯಂತ್ ಸಿ.ಬಿ. ಅವರು ನಿವೃತ್ತರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ನಿವೃತ್ತ ಅಧಿಕಾರಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ನಿವೃತ್ತಿ ಹೊಂದಿದ ಅಧಿಕಾರಿಗಳು :
ಉಪ್ಪಿನಂಗಡಿ ಠಾಣಾ ಪಿಎಸ್ಐ ಸುಧಾಕರ್ ಜಿ, ಪುತ್ತೂರು ನಗರ ಠಾಣಾ ಎಎಸ್ಐ ನಿತ್ಯಾನಂದ ವಿ, ಸುಬ್ರಹ್ಮಣ್ಯ ಠಾಣಾ ಎಎಸ್ಐ ಕೆ. ಮೋಹನ್, ದ.ಕ. ಎ.ಆರ್.ಎಸ್.ಐ ಡಿಎಆರ್ ಚಂದ್ರಕಾಂತ್ ಬಿ., ಪುತ್ತೂರು ನಗರ ಠಾಣಾ ಎಎಸ್ಐ ಲೋಕನಾಥ್ ಕೆ., ಉಪ್ಪಿನಂಗಡಿ ಠಾಣಾ ಎಎಸ್ಐ ಶಿವಪ್ಪ ಪೂಜಾರಿ ಕೆ., ಬೆಳ್ತಂಗಡಿ ಸಂಚಾರ ಠಾಣಾ ಪಿಎಸ್ಐ ಲಕ್ಷ್ಮಣ್ ಸಿ.ಟಿ., ಪುತ್ತೂರು ನಗರ ಠಾಣಾ ಪಿಎಸ್ಐ ಸೋಮನಾಥ್ ರಾಮ ನಾಯ್ಕ್, ಜಿಲ್ಲಾ ಕಂಟ್ರೋಲ್ ರೂಮ್ ನ ಪಿಎಸ್ಐ ಮೋಹನ್.




























