ಪುತ್ತೂರು : ನವತೇಜ ಪುತ್ತೂರು, ICAR-IIHR, ಜೇಸಿಐ ಪ್ರಸ್ತುತ ಪಡಿಸುತ್ತಿರುವ ‘ಹಲಸು ಹಣ್ಣು ಮೇಳ-2023’ ಜೂ.17,18 ರಂದು ಜೈನ ಭವನದಲ್ಲಿ ನಡೆಯಲಿದೆ.
ನೇರ ರೈತರಿಂದ ತಾಜಾ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ, ವಿಶೇಷ ಆಹಾರ ಮಳಿಗೆಗಳು, ರೈತ ಸಂಪರ್ಕ ಹಾಗೂ ಸಮಾಲೋಚನೆ, ಹಣ್ಣು ಗಿಡಗಳು ಮತ್ತು ಬೀಜಗಳು, ಹಣ್ಣು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಉತ್ಪನ್ನಗಳು, ಕೃಷಿ ಉದ್ಯಮ ಮಳಿಗೆಗಳು, ವಿಶೇಷ ಸ್ಪರ್ಧೆ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಹಲಸಿನ ಹಪ್ಪಳ, ಸಂಡಿಗೆ, ಹೋಳಿಗೆ, ಹಲಸಿನ ದೋಸೆ, ಹಲಸಿನ ಪಾನಿಪೂರಿ, ಹಲಸಿನ ಮಂಚೂರಿ, ಹಲಸಿನ ಕೇಕ್, ಹಲಸಿನ ಸೀರಾ, ಹಲಸಿನ ಪೇಡಾ ಹೀಗೆ ಹಲಸನ್ನೇ ಬಳಸಿದ ಬಹುತೇಕ ತಿಂಡಿ-ತಿನಿಸುಗಳು ಹಾಗೂ ಇತರ ಆಹಾರ ಉತ್ಪನ್ನಗಳು ದೊರೆಯಲಿದೆ.
ಹಲಸಿನ ಜೊತೆಗೆ ಸ್ಥಳೀಯ ಕೃಷಿಕರು ತಮ್ಮ ತೋಟಗಳಲ್ಲಿ ಬೆಳೆದ ರಂಬೂಟಾನ್, ಡ್ಯಾಗ್ರನ್ ಫ್ರುಟ್ಸ್, ಪಪ್ಪಾಯ ಹೀಗೆ ಹಲವು ಬಗೆಯ ಹಣ್ಣುಗಳನ್ನೂ ಮೇಳದಲ್ಲಿ ಪರಿಚಯಿಸುವ ಮೂಲಕ ಗಮನಸೆಳೆಯಲಿದ್ದಾರೆ..




























