ಪುತ್ತೂರು : ಅರುಣ್ ಪುತ್ತಿಲ ಅಭಿಮಾನಿ ಬಳಗ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಅದರ ಗ್ರೂಪ್ ಲಿಂಕನ್ನು ಬಳಸಿಕೊಂಡು ಗ್ರೂಪ್ ಸೇರಿದ ವ್ಯಕ್ತಿಯೋರ್ವ ಪುತ್ತೂರಿನಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಅರುಣ್ ಪುತ್ತಿಲರ ತೇಜೋವಧೆಯ ಜೊತೆಗೆ ಕೋಮುಪ್ರಚೋದನೆಗೆ ಪ್ರೇರೆಪಿಸಿರುವುದಾಗಿ ಆರೋಪಿಸಿ ಬಂಟ್ವಾಳ ನಗರಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅರುಣ್ ಪುತ್ತಿಲ ಅಭಿಮಾನಿ ಸಂಘದ ಗೌರವಾಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಎಂಬವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಅರುಣ್ ಕುಮಾರ್ ಪುತ್ತಿಲರ ಅಸಂಖ್ಯಾತ ಅಭಿಮಾನಿ ಬಳಗವಿದ್ದು, ಇದಕ್ಕೆ ಪೂರಕವಾಗಿ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗ ಬಂಟ್ವಾಳ ಎಂಬ ವಾಟ್ಸಪ್ ಗ್ರೂಪ್ ಇದ್ದು, ಈ ಗ್ರೂಪ್ನಲ್ಲಿ ಸಮಾಜದ ಅಶಕ್ತರ ಏಳಿಗೆಗೆ ದುಡಿಯುವ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಸದ್ರಿ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಗಳಲ್ಲಿ ಒಬ್ಬನಾಗಿರುತ್ತೇನೆ. ಅದರಂತೆ ಸದ್ರಿ ಗ್ರೂಪ್ ನ ಇನ್ ವೈಟ್ ಲಿಂಕನ್ನು ಬಳಸಿಕೊಂಡು “ಯಾ ಅಲ್ಲಾಹ್” ಎಂಬ ನಾಮಾಂಕಿತ ಹೊಂದಿರುವ ವ್ಯಕ್ತಿಯು ಮೊಬೈಲ್ ನಂಬರ್ ನಿಂದ ಇತ್ತೀಚಿಗೆ ಪುತ್ತೂರಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಖಾಸಗಿ ಭಾಗಗಳ ಫೋಟೋಗಳನ್ನು ಬಳಸಿಕೊಂಡು ಅರುಣ್ ಕುಮಾರ್ ಪುತ್ತಿಲರಿಗೆ ಅವಮಾನವಾಗುವ ರೀತಿಯಲ್ಲಿ ಹಾಗೂ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಸಾರುವ ಭಗವಾಧ್ವಜದ ಚಿತ್ರವನ್ನು ಜೋಡಿಸಿ ಸದ್ರಿ ಫೋಟೋಗಳ ಜೊತೆ ನಿಂದನಾತ್ಮಕ ಬರಹಗಳನ್ನು ನಮೂದಿಸಿ ಗ್ರೂಪ್ ಗೆ ಕಳುಹಿಸಿದ್ದು, ಅಲ್ಲದೆ ಕೆಲವೊಂದು ಸ್ವರ ಸಂದೇಶಗಳನ್ನು ಹಾಗೂ ಗೋ ಮಾಂಸದ ಪ್ಯಾಕೇಟ್ ಗಳನ್ನು ಕಳುಹಿಸಿ ಹಿಂದೂ ಧರ್ಮಕ್ಕೆ ಧಕ್ಕೆಯನ್ನುಂಟು ಮಾಡುವ ಹಾಗೂ ಕೋಮುಪ್ರಚೋದನೆಯನ್ನು ಉಂಟು ಮಾಡಿರುತ್ತಾರೆ. ಈ ರೀತಿ ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು.
ಈ ಬಗ್ಗೆ ಐಪಿಸಿ 1860 u/s-153A, 505(2) ರಂತೆ ಪ್ರಕರಣ ದಾಖಲಾಗಿದೆ..
























