ಪುತ್ತೂರು : ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಜಿ ರವರು ಅರುಣ್ ಕುಮಾರ್ ಪುತ್ತಿಲ ರವರ ಮನೆಯಲ್ಲಿ ಜೂ.9 ರಂದು ವಾಸ್ತವ್ಯ ಮಾಡಿದರು.

ಅರುಣ್ ಕುಮಾರ್ ಪುತ್ತಿಲ ದಂಪತಿ ಪಾದಪೂಜೆ ಮಾಡಿ ಶ್ರೀಗಳನ್ನು ಸ್ವಾಗತಿಸಿದರು.

ಪೇಜಾವರ ಶ್ರೀಗಳು ಅರುಣ್ ಪುತ್ತಿಲ ರವರ ಬಳಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ಸ್ವಾಮೀಜಿಗಳ ಜೊತೆ ಪೇಜಾವರ ಆಪ್ತ ವರ್ಗ ಕೂಡ ಆಗಮಿಸಿತ್ತು.

ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನಡೆದ ಶಿಲಾನ್ಯಾಸದ ಬಳಿಕದ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

























