ನವದೆಹಲಿ : ದೇಶದಲ್ಲಿ ಕೋವಿಡ್ ಲಸಿಕೆ ಪಡೆದ ಕೋಟ್ಯಾಂತರ ಜನರು, ರಾಜಕಾರಣಿಗಳು , ಪತ್ರಕರ್ತರ ಖಾಸಗಿ ಮಾಹಿತಿ ಸೋರಿಕೆಯಾಗಿ ಎಂದು ಟಿಎಂಸಿ ನಾಯಕ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.
2020ರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಭಾರತದಲ್ಲಿ ಸಾಕಷ್ಟು ಜನರ ಸಾವು ನೋವಿಗೆ ಕಾರಣವಾಯ್ತು. ಇದನ್ನು ತಡೆಗಟ್ಟಲು ಲಸಿಕೆಯನ್ನು ತರಲಾಯ್ತು. ದೇಶದ ಬಹುಸಂಖ್ಯಾ ಜನರು ಲಸಿಕೆ ಪಡೆದರು. ಆದರೀಗ ಲಸಿಕೆ ಪಡೆದವರ ಡಾಟಾ ಟೆಲಿಗ್ರಾಂ ಆ್ಯಪ್ ನಲ್ಲಿ ಸೋರಿಕೆಯಾಗಿದೆ.
ಕೋವಿನ್ ಪೋರ್ಟಲ್ ನಲ್ಲಿ ಅಪ್ ಡೇಟ್ ಆಗಿದ್ದ ಲಸಿಕೆ ಫಲಾನುಭವಿಗಳ ಡಾಟಾ ಸೋರಿಕೆಯಾಗಿದೆ. ಲಸಿಕೆ ಪಡೆದವರ ಆಧಾರ್ ನಂಬರ್, ಮೊಬೈಲ್ ನಂಬರ್, ವಿಳಾಸ, ಜನ್ಮ ದಿನಾಂಕ, ವೋಟರ್ ಐಡಿ, ಪ್ಯಾನ್ ಕಾರ್ಡ್ ವಿವರ ಸೇರಿ ಎಲ್ಲ ಮಾಹಿತಿ ಟೆಲಿಗ್ರಾಂನಲ್ಲಿ ಸಿಕ್ಕಿದೆ.
ಭಾರತದಲ್ಲಿ 92 ಕೋಟಿಗೂ ಹೆಚ್ಚು ಜನರು ಕೊರೊನಾ ಲಸಿಕೆ ಪಡೆದಿದ್ದರು. ಆದರೀಗ ಟೆಲಿಗ್ರಾಂನಲ್ಲಿ ಈ ಮಾಹಿತಿ ಸೋರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪತ್ನಿ ರೀತೂ ಖಂಡೂರಿ , ಪಿ.ಚಿದಂಬರಂ, ಕೆಸಿ ವೇಣುಗೋಪಾಲ್ ಸೇರಿ ಹಲವು ಗಣ್ಯರ ಡಾಟಾ ಸೋರಿಕೆಯಾಗಿದೆ. ಕೋವಿನ್ ಪೋರ್ಟಲ್ ಹ್ಯಾಕ್ ಮಾಡಿ ಟೆಲಿಗ್ರಾಂ ನಲ್ಲಿ ಡಾಟಾ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಮೊಬೈಲ್ ನಂಬರ್, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್ ವಿವರ, ಮತದಾರರ ಗುರುತಿನ ಚೀಟಿಗಳು ಮತ್ತು ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ಎಲ್ಲಾ ಲಸಿಕೆ ಪಡೆದ ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಆರೋಪಗಳಿಗೆ ಪುಷ್ಟಿ ನೀಡುವಂತೆ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ,ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಹೀಗೆ ಹಲವರ ಮಾಹಿತಿಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
ಕೋವಿಡ್-19 ಲಸಿಕೆಯನ್ನು ಪಡೆದ ಪ್ರತಿಯೊಬ್ಬ ಭಾರತೀಯನ ವೈಯಕ್ತಿಕ ವಿವರಗಳು ಈ ಸೋರಿಕೆಯಾದ ಡೇಟಾಬೇಸ್‌ನಲ್ಲಿ ಉಚಿತವಾಗಿ ಲಭ್ಯವಿದೆ ಎಂದು ಅವರು ಹೇಳಿದರು.
Biggest Data Leak of Billion Indians?#CoWinDataLeak Reported by @thefourthlive @ManoramaDaily.
— MNV Gowda (@MNVGowda) June 12, 2023
Those who took vaccination via Cowin are part of this database. It happened even after the first warning back in 2021. Now state-of-the-art security infrastructure has faced a… pic.twitter.com/WDCUkniFSa


























