ವಿಟ್ಲ : ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಶಿಕ್ಷಕಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಕುಡೂರು ಕುಕ್ಕುದಡ್ಕ ನಿವಾಸಿ ವಾಲೆಂಟೈನ್ ವಿಲ್ಫ್ರೆಡ್ ಪಿಂಟೋ ಎಂಬವರು ವಿಟ್ಲದಿಂದ ಅವರ ಮನೆ ಕಡೆ ತೆರಳುವಾಗ ವಿಟ್ಲ ಅನಿಲಕಟ್ಟೆ ರಸ್ತೆಯಲ್ಲಿ ಅವರ ಪರ್ಸ್ ಕಳೆದು ಹೋಗಿದ್ದು, ಅದು ವಿಟ್ಲ ಅನಿಲ ಕಟ್ಟೆ ಶಾಲೆಯ ಶಿಕ್ಷಕಿ ಪಾರ್ವತಿ ಎಂಬವರಿಗೆ ದೊರೆತಿದ್ದು, ಅವರು ಅದನ್ನು ಹಲವಾರು ಜನರ ಬಳಿ ಕೇಳಿ ಪಿಂಟೋ ರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದರು.
ಬಳಿಕ ಪಿಂಟೋ ರವರು ಶಾಲೆಗೆ ಆಗಮಿಸಿ ತಮ್ಮ ಪರ್ಸ್ ಅನ್ನು ಪಡೆದುಕೊಂಡಿದ್ದು, ಶಿಕ್ಷಕಿಯ ಪ್ರಾಮಾಣಿಕತೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪರ್ಸ್ ಮರಳಿ ದೊರೆತ ಹಿನ್ನೆಲೆ ವಾಲೆಂಟೈನ್ ವಿಲ್ಫ್ರೆಡ್ ಪಿಂಟೋ ರವರು ಅನಿಲ ಕಟ್ಟೆ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ನೀಡಿದ್ದಾರೆ.




























