ಪುತ್ತೂರು : ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2023ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿನಿ ಗೌತಮಿ ಪೈ ( ವಿಟ್ಲದ ರಾಘವೇಂದ್ರ ಪೈ ಎ ಮತ್ತು ಮಾಧವೀಆರ್ ಪೈ ದಂಪತಿ ಪುತ್ರಿ) ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 542 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 70655ನೇ ರ‍್ಯಾಂಕ್, ಕೆಟಗರಿ ವಿಭಾಗದಲ್ಲಿ 26336ನೇ ರ‍್ಯಾಂಕ್ ಗಳಿಸಿದ್ದಾರೆ.
ವೇದಾಕ್ಷ ಎಂ ( ಪುತ್ತೂರಿನ ಪಡ್ನೂರು ಗ್ರಾಮದ ರಮೇಶ ಎಂ ಹಾಗೂ ಬೇಬಿ ರವರ ಪುತ್ರ ) 522 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 40394ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 40394ನೇ ರ‍್ಯಾಂಕ್ ಗಳಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಾದ ಸ್ತುತಿಶೀಲ (487ಅಂಕ),ಅನನ್ಯಲಕ್ಷ್ಮೀ (479ಅಂಕ), ನೇಹಾ ಭಟ್ ( 453ಅಂಕ), ಶ್ರೀರಾಮ್ ಭಟ್ ( 446ಅಂಕ) ಮತ್ತು ಆಶ್ರಯ (436 ಅಂಕ) ಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತುಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

























