ಪುತ್ತೂರು : ಚಿಕ್ಕಪುತ್ತೂರಿನ ರೈಲ್ವೇ ಸ್ಟೇಷನ್ ಬಳಿಯ ನಿವಾಸಿ ಎಲ್.ಟಿ. ಮಹಮ್ಮದ್ (ಬಾವು) (50) ಹೃದಯಾಘಾತದಿಂದಾಗಿ ಸೌದಿ ಅರೇಬಿಯಾದ ರಿಯಾದ್ ನಲ್ಲಿ ನಿಧನರಾದರು.

ಮಹಮ್ಮದ್ ಕಳೆದ ಹಲವು ವರುಷಗಳಿಂದ ಅರೇಬಿಯಾದ ರಿಯಾದ್ ನಲ್ಲಿ ಉದ್ಯೋಗದಲ್ಲಿದ್ದರು.
ದಿ. ಎಲ್.ಟಿ. ಇಬ್ರಾಹಿಂ ಹಾಜಿ ರವರ ಪುತ್ರನಾಗಿರುವ ಮಹಮ್ಮದ್, ಪುತ್ತೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಜಾಕ್ ಹಾಜಿ ರವರ ಕಿರಿಯ ಸಹೋದರನಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..


























