ಪುತ್ತೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾನೂನನ್ನು ಹಿಂದಕ್ಕೆ ಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದರ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹೋರಾಟ ನಡೆಸಲಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮಾಡುವ ಸರಕಾರದ ಕ್ರಮವನ್ನು ಕೈ ಬಿಡದಿದ್ದರೆ.., ರಾಜ್ಯಾದ್ಯಂತ ಉಗ್ರ ಹೋರಾಟಗಳು ಮುಂದಿನ ದಿನ ನಡೆಯಬಹುದು. ಇದರ ಪರಿಣಾಮ ನೇರ ಸರಕಾರದ ಮೇಲೆ ಆಗಲಿದೆ.
ಮತಾಂತರ ನಿಷೇಧ ಕಾಯ್ದೆ ಇರುವುದು ಯಾವುದೇ ಮತ, ಧರ್ಮದ ವಿರುದ್ಧ ಅಲ್ಲ. ಎಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಅದರ ವಿರುದ್ಧ ಮಾಡಿರುವ ಈ ಕಾನೂನನ್ನು ಸಮಾಜ ಸ್ವೀಕಾರ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದೆ. ಆದರೇ ಇದೀಗ ಸಿದ್ದರಾಮಯ್ಯ ಸರಕಾರ ಮತಾಂತರ ಕಾಯ್ದೆಯನ್ನೇ ಹಿಂಪಡೆಯುವ ದಾಸ್ಯದ ಯೋಚನೆ ಏನಿದೆಯೋ ಅದನ್ನು ಬಿಟ್ಟು ಬಿಡಬೇಕು. ಇಲ್ಲವಾದಲ್ಲಿ ಹಿಂದೂ ಸಮಾಜ ಉತ್ತರ ನೀಡಲಿದೆ ಎಂದು ಅವರು ತಿಳಿಸಿದರು.


























