ಪುತ್ತೂರು : ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಜಯಮಾಲಾ ವಿ ಎನ್ ರವರ ನೇತೃತ್ವದಲ್ಲಿ ನೂತನ ಶಾಲಾ ಮಂತ್ರಿಮಂಡಲ ರಚಿಸುವ ನಿಟ್ಟಿನಲ್ಲಿ ಹಾಗೂ ಪ್ರಜಾಪ್ರಭುತ್ವದ ಮತ್ತು ಮತದಾನದ ಅರಿವು ಮೂಡಿಸುವುದರೊಂದಿಗೆ ಚುನಾವಣೆಯ ಮೂಲಕ ಶಾಲಾ ನಾಯಕ ಉಪನಾಯಕ ಆಯ್ಕೆ ಮಾಡಲಾಯಿತು.

ಈ ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಹತ್ತನೇ ತರಗತಿಯ ವಿದ್ಯಾರ್ಥಿ ಪ್ರಥಮ್ ಕೆ ಜೆ ಹಾಗೂ ಉಪನಾಯಕನಾಗಿ 9ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ರೈ ಆಯ್ಕೆಗೊಂಡಿರುತ್ತಾರೆ.
ಈ ಚುನಾವಣಾ ಜವಾಬ್ದಾರಿಯನ್ನು ಶಾಲಾ ಸಹ ಶಿಕ್ಷಕರಾದ ಪ್ರಶಾಂತಿ ಪಿ ಹಾಗೂ ರಮೇಶ್ ಎನ್ ರವರು ನಿರ್ವಹಿಸಿದರು.

























